ನವದೆಹಲಿ,ಅ 19: ಭಾರತದ ಗಡಿಯೊಳಕ್ಕೆ ನುಸುಳಲು ಮಾರ್ಗ ಯೋಜನೆ ಸಿದ್ದಪಡಿಸುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಭೂಗತ ಕಾರ್ಮಿಕರಿಗೆ ಸೂಚನೆ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ವಾಪಸ್ ಪಡೆದ ನಂತರ ಪಾಕಿಸ್ತಾನ ದಿನ ಕ್ಯಾತೆ ತೆಗೆಯುತ್ತಿದ್ದು, ತನ್ನೆಲ್ಲಾ ಪ್ರಯತ್ನಗಳು ವಿಫಲವಾದ ಕಾರಣದಿಂದ ಇದೀಗ ಈ ಹತಾಶೆ ಮನೋಭಾವನೆಯಿಂದ ಈ ತಂತ್ರ ರೂಪಿಸಲು ಮುಂದಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದಲೇ ಗೊತ್ತಾಗಿದೆ. ಚಳಿಗಾಲದಲ್ಲಿ ಉಗ್ರರು ಭಾರತದ ಒಳನುಸುಳುವಿಕೆಯ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಿಮಮಳೆ ಸುರಿಯುವುದಿರಂದ ಭಾರತದ ಒಳಗಡೆ ನುಸುಳಲು ಯತ್ನಿಸುತ್ತಾರೆ . ಹೀಗಾಗಿ ಐಎಸ್ಐ ಚಳಿಗಾಲಕ್ಕೂ ಮುನ್ನ ಹೊಸ ಮಾರ್ಗ ಯೋಜನೆಯನ್ನು ಸಿದ್ಧಪಡಿಸುವಂತೆ ಕಾಶ್ಮೀರದಲ್ಲಿರುವ ತನ್ನ ಭೂಗತ ಕಾರ್ಮಿಕರಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ ಎಂದು ಹೇಳಲಾಗಿದೆ.