ಚಿತ್ರಕಲೆ ಎಲ್ಲ ಕಲೆಗಳಿಗೂ ತಾಯಿಬೇರು: ಡಾ. ವೀರಣ್ಣ ರಾಜೂರ

ಚಿತ್ರಕಲೆ ಎಲ್ಲ ಕಲೆಗಳಿಗೂ ತಾಯಿಬೇರು: ಡಾ. ವೀರಣ್ಣ ರಾಜೂರ Painting is the mother of all arts: Dr. Veeranna Rajura

ಧಾರವಾಡ 20: ಚಿತ್ರಕಲೆ ಎಲ್ಲ ಕಲೆಗಳಿಗೂ ತಾಯಿಬೇರು. ಇದು ಮನುಷ್ಯನ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಪೂರಕವಾಗಿದ್ದು, ಅದು ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು 136ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬಿ. ಮಾರುತಿ ಅವರ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು. 

ಮುಂದುವರೆದು, ಕ.ವಿ.ವ. ಸಂಘವು ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯದ ಬೆಳವಣಿಗೆಗಾಗಿ 135 ವರ್ಷಗಳಿಂದ ನಿರಂತರವಾಗಿ ಶ್ರಮಸುತ್ತಿರುವುದು ಶ್ಲಾಘನೀಯ. ಚಿತ್ರಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಬಿ. ಮಾರುತಿ ಅವರು ಒಬ್ಬ ರಾಷ್ಟ್ರಮಟ್ಟದ ಚಿತ್ರಕಲಾವಿದರಾದರು. ಅವರು ಹುಟ್ಟಿ ಬೆಳೆದ ಪರಿಸರವೇ ಅವರನ್ನು ಒಬ್ಬ ಶ್ರೇಷ್ಠ ಚಿತ್ರಕಲಾವಿದರನ್ನಾಗಿ ರೂಪಿಸಿತು. ಅವರು ಓರ್ವ ಬಹುಮುಖ ಪ್ರತಿಭಾನ್ವಿತ ಚಿತ್ರಕಲಾವಿದರಾಗಿದ್ದಾರೆ. ಅವರು ಚಿತ್ರ ಕಲಾ ಕ್ಷೇತ್ರಕ್ಕೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಕಲಾವಿದರು. ಅವರ ಚಿತ್ರಕಲೆಯಲ್ಲಿ ವಿಭಿನ್ನತೆ ಹಾಗೂ ನವ್ಯತೆ ಇದೆ ಎಂದರು.  

ಚಿತ್ರಕಲಾವಿದ ಬಿ. ಮಾರುತಿ ಮಾತನಾಡಿ, ಧಾರವಾಡದಲ್ಲಿ ಚಿತ್ರಕಲಾವಿದರ ಕಲಾ ಪ್ರದರ್ಶನಕ್ಕೆ ಸುಸಜ್ಜಿತ  ಆರ್ಟ್‌ಗ್ಯಾಲರಿ ಇಲ್ಲದ ಸಂದರ್ಭದಲ್ಲಿ ಕ.ವಿ.ವ. ಸಂಘ ಆರ್ಟ್‌ಗ್ಯಾಲರಿ ಪ್ರಾರಂಭಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ಪ್ರತಿ ತಿಂಗಳು ಕ.ವಿ.ವ. ಸಂಘದಲ್ಲಿ ಕಲಾ ಪ್ರದರ್ಶನಗಳು ಏರು​‍್ಡತ್ತಿವೆ. ಅನೇಕ ಚಿತ್ರಕಲಾ ಪ್ರೇಮಿಗಳು ನನ್ನ ಅನೇಕ ಚಿತ್ರಪಟಗಳನ್ನು ಖರೀದಿಸಿ ಪ್ರೋತ್ಸಾಹಿಸಿದ್ದು, ಇನ್ನೂ ಹೆಚ್ಚು ಆ ಕ್ಷೇತ್ರದಲ್ಲಿ ಕಾರ್ಯಮಾಡುವಂತೆ ಪ್ರೇರೆಪಣೆ ನೀಡಿದ್ದಾರೆ. ನಾನು ಹುಟ್ಟಿದ ಬೆಳೆದ ಹಂಪಿಯ ಪರಿಸರವು ನನ್ನ ಚಿತ್ರಕಲಾ ಪ್ರತಿಭೆಗೆ ಸ್ಫೂರ್ತಿಯಾಗಿದೆ ಎಂದರು.  

ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಸಂಘವು ಕಲಾವಿದರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು. ಶಂಕರ ಹಲಗತ್ತಿ ಸ್ವಾಗತಿಸಿ, ಕಾರ‌್ಯಕ್ರಮ ನಿರ್ವಹಿಸಿ, ವಂದಿಸಿದರು.  

ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಎಂ.ಎಂ. ಚಿಕ್ಕಮಠ, ಎಸ್‌.ಕೆ. ಪತ್ತಾರ, ಶ್ರೀಶೈಲಗೌಡ ಕಮತರ, ಎಲ್‌.ಐ. ಲಕ್ಕಮ್ಮನವರ, ವಿಠ್ಠಲ ಬಸ್ಲಿಗುಂದಿ ಸೇರಿದಂತೆ ಮುಂತಾದವರಿದ್ದರು.