ಚಿತ್ರಕಲೆ ಭಾವನೆ ಅರಳಿಸುವ ಪ್ರಭಲ ಮಾಧ್ಯಮ: ಡಾ. ಶಿವಾನಂದ ಶೆಟ್ಟರ
ಧಾರವಾಡ 19: ಚಿತ್ರಕಲೆ ಭಾವನೆ ಅರಳಿಸುವ ಪ್ರಭಲ ಮಾಧ್ಯಮ. ಚಿತ್ರಕಲೆ ನಮ್ಮ ಬದುಕನ್ನು ಸುಂದರಗೊಳಿಸುತ್ತದೆ ಎಂದು ಕಲಾ ಚಿಂತಕ ಡಾ. ಶಿವಾನಂದ ಶೆಟ್ಟರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕಲಾವಿದ ಶ್ರೀ ಅಶೋಕ ಯು. ಅವರ ‘ವರ್ಣ ವಿಕಾಸ’ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಗುವಿಗೆ ಗೊತ್ತಿರುವ ಭಾಷೆ ಚಿತ್ರಕಲೆ. ಓದು ಬರಹದ ಮೊದಲು ಮಗುವಿಗೆ ಚಿತ್ರ ಬರೆಯುವ ಹವ್ಯಾಸ ರೂಢಿಸಬೇಕು. ಇಂದು ಚಿತ್ರಕಲಾವಿದರು ತಮ್ಮ ಸಾಂಪ್ರದಾಯಿಕ ಕಲೆ ಬದಲಿಸಿ ಪ್ರಯೋಗಶೀಲತೆಯನ್ನು ಬೆಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಅಶೋಕ ಯು. ಒಬ್ಬ ಉತ್ತಮ ಲ್ಯಾಂಡಸ್ಕೇಪ ಚಿತ್ರ ಪ್ರವೀಣರು. ಚಿತ್ರಕಲಾವಿದರು ಇಂದು ಅತ್ಯಂತ ಸಂಧಿಗ್ದ ಪರಿಸ್ಥಿತಿಯಲ್ಲಿ ಇದ್ದು, ಸಾಧ್ಯವಾದಷ್ಟು ಅವರಿಗೆ ಸಹಾಯ ಸಹಕಾರ ನೀಡುವು ಅವಶ್ಯವಿದೆ ಎಂದು ಹೇಳಿದರು.
ಹಿರಿಯ ಚಿತ್ರ ಕಲಾವಿದ ಎಫ್. ವಿ. ಚಿಕ್ಕಮಠ ಮುಖ್ಯ ಅತಿಥಿಯಾಗಿ ಮಾತನಾಡಿ, ಧಾರವಾಡದ ಕ.ವಿ.ವ. ಸಂಘದಲ್ಲಿ ಹಮ್ಮಿಕೊಂಡ ಈ ಚಿತ್ರಕಲಾ ಪ್ರದರ್ಶನ ಕಲಾವಿದರಾದ ಅಶೋಕ ಯು. ಅವರ ಪ್ರಥಮ ಚಿತ್ರಕಲಾ ಪ್ರದರ್ಶನವಾಗಿದೆ. ಚಿತ್ರಕಲಾವಿದರ ಕಲಾಕೃತಿಗಳನ್ನು ಕೊಂಡು ಅವರನ್ನು ಪ್ರೋತ್ಸಾಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಚಿತ್ರಕಲೆ ಜನರಿಗೆ ಪ್ರೇರಣೆ ನೀಡುವ ಮಾಧ್ಯಮವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಬಿ. ಮಾರುತಿ ಮಾತನಾಡಿ, ಚಿತ್ರಕಲೆ ಒಂದು ಸಂವಹನ ಮಾಧ್ಯಮವಾಗಿದೆ. ಕಲಾವಿದರು ಭಾವನೆಗಳಿಗೆ ಬಣ್ಣ ತುಂಬುವ ಕಾರ್ಯವನ್ನು ಮಾಡುತ್ತಾರೆ. ಮಾನಸಿಕ ನೆಮ್ಮದಿಗೆ ಹಾಗೂ ಬಿಡುವಿನ ವೇಳೆಯ ಸದುಪಯೋಗಕ್ಕೆ ಚಿತ್ರಕಲೆಯು ಸಹಕಾರಿಯಾಗಿದ್ದು, ಜೊತೆಗೆ ಬದುಕಿನಲ್ಲಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ ಎಂದರು.
ಲ್ಯಾಂಡ್‌ಸ್ಕೇಪ ಚಿತ್ರಕಲಾವಿದರಾದ ಅಶೋಕ ಯು. ಅವರು ತಮ್ಮ ಚಿತ್ರಕಲಾ ಪಯಣದ ಅನುಭವಗಳನ್ನು ಹಂಚಿಕೊಂಡರು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ಎಸ್.ಕೆ. ಪತ್ತಾರ, ಡಾ. ಬಸವರಾಜ ಕುರಿಯವರ, ಎಂ.ಆರ್. ಬಾಳಿಕಾಯಿ, ಪ್ರತಾಪ ಬಹುರೂಪಿ, ಡಿ.ಎಂ. ಬಡಿಗೇರ, ಶಂಕರ ಸೇರಿದಂತೆ ಚಿತ್ರಕಲಾವಿದರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 