ಪದ್ಮಶ್ರೀ ಡಾ.ಪ್ರಭಾಕರ ಕೋರೆ ಎಸ್‌ಐಆರ್‌ಪ್ರಕ್ರಿಯೇಯಲ್ಲಿ ಭಾಗಿ

ಪದ್ಮಶ್ರೀ ಡಾ.ಪ್ರಭಾಕರ ಕೋರೆ ಎಸ್‌ಐಆರ್‌ಪ್ರಕ್ರಿಯೇಯಲ್ಲಿ ಭಾಗಿ Padmashri Dr. Prabhakar Kore participates in the SIR process

 ರಾಜ್ಯಾದ್ಯಂತ ಜುಲೈ 29ರ ವರೆಗೆ ಮನೆ ಮನೆ ಮತದಾರರ ಪಟ್ಟಯ ವಿಶೇಷ ಸಮಗ್ರ ಪರಿಷ್ಕರಣೆ ಸಮೀಕ್ಷೆ ನಡೆಯುತ್ತಿದ್ದು ಚುನಾವಣಾ ಆಯೋಗದಿಂದ ನಿಯುಕ್ತರಾದ ಬೂತ್ ಮಟ್ಟದ ಅಧಿಕಾರಿಗಳಿಗೆ  ಅಂಕಲಿಯಲ್ಲಿ ಪದ್ಮಶ್ರೀ ಡಾ.ಪ್ರಭಾಕರ ಕೋರೆಯವರು  ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿ, ಮತದಾರರ ವಿಶೇಷ ಸಮಗ್ರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ  ಭಾಗವಹಿಸಿದರು.  

ಡಾ.ಪ್ರಭಾಕರ ಕೋರೆಯವರು ಈ ಸಂದರ್ಭದಲ್ಲಿ  ಪ್ರತಿಯೊಬ್ಬ ನಾಗರಿಕನು ತಮ್ಮ ಮನೆ ಮನೆಗೆ ಆಗಮಿಸುವ ಃಐಓ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿ, ತಮ್ಮ ಹೆಸರು ಹಾಗೂ ವಿವರಗಳು ಮತದಾರರ ಪಟ್ಟಿಯಲ್ಲಿ ನಿಖರವಾಗಿ ಮತ್ತು ಸಮರ​‍್ಕವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.