ನಾಗರಾಳದ ಕಪ್ಪರ ಪಡಿಯಮ್ಮದೇವಿ ಜಾತ್ರಾ ಮಹೋತ್ಸವ

ನಾಗರಾಳದ ಕಪ್ಪರ ಪಡಿಯಮ್ಮದೇವಿ ಜಾತ್ರಾ ಮಹೋತ್ಸವ   Padiammadevi Jatra Festival at Kappa in Nagarala

ಲೋಕದರ್ಶನ ವರದಿ 

ಬೀಳಗಿ  01: ಸುಗ್ಗಿಯ ಕಾಲದ ನಂತರ ಗ್ರಾಮೀಣ ಪರಿಸರದ ಜಾತ್ರೆಗಳು ಸಂಭ್ರಮ ಸಡಗರೊಂದಿಗೆ ಪ್ರಾರಂಭಗೊಳ್ಳುವುದರ ಮೂಲಕ ಸಾಮಾಜಿಕ ಸಾಮರಸ್ಯ ಬೆಳೆಸುತ್ತವೆ ಎಂದು ಸಾಹಿತಿ ಚಂದ್ರಶೇಖರ ಕಾಳನ್ನವರ ಹೇಳಿದರು.ತಾಲ್ಲೂಕಿನ ನಾಗರಾಳ ಗ್ರಾಮದ ಕಪ್ಪರ ಪಡಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು  ಹಾಗೂ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಬೀಳಗಿ ಇವರುಗಳ ಸಯುಂಕ್ತಾಶ್ರಯದಲ್ಲಿ ನಡೆದ ಶರಣ ಸಾಂಸ್ಕೃತಿಕ ವೈಭವ ಮತ್ತು ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಾಳ ಗ್ರಾಮವು ನಾಡಿನಲ್ಲಿ ಭಾವೈಕತೆ ಬೆಳೆಸುವ ಮೂಲಕ ಸಾಹಿತ್ಯ, ಸಾಂಸ್ಕೃತಿಕ,ಜಾನಪದರ ಪರಂಪರೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ.  ನಾಡಿನ ಶರಣ ಸಂಸ್ಕೃತಿಯ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ  ಸಾಂಸ್ಕೃತಿಕ ಸಂಘಟಕರು ನಿರತರಾಗಿದ್ದಾರೆ ಎಂದರು.  ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ ಕೂಡಿ ಬಾಳುವ ಸಂತೋಷ ವನ್ನು ಉಳಿಸಿಕೊಂಡು ಬಂದವರೆ ಜಾನಪದರು.ಜನಪದರು ಎಂದಿಗೂ ಪ್ರಚಾರ ಮತ್ತು ಪ್ರಸಿದ್ಧಿಗೆ ಒಳಪಟ್ಟವರಲ್ಲ.ತಾಂತ್ರಿಕತೆ  ಹೆಚ್ಚಾದಂತೆ ಜಾನಪದ ಮರೆಯಾಗುತ್ತಿದೆ ಎಂದು ತಿಳಿಸಿದರು. 

ಸಾನಿಧ್ಯ ವಹಿಸಿದ ಬೀಳಗಿ ಕಲ್ಮಠದ ಪೂಜ್ಯ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ದಿಗಂಬರೇಶ್ವರ ಮಠದ  ಶೇಷಪ್ಪಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಬಾಗಲಕೋಟ ನಿವೃತ್ತಿ ಕೃಷಿ ಅಧಿಕಾರಿ  ಪಿ.ಡಿ.ಜತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಗರಾಳ ಗ್ರಾಮ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಶ್ರೀಮಂತವಾದ ಪರಂಪರೆ ಸಂಪ್ರದಾಯವನ್ನು ಹೊಂದಿದೆ ಎಂದು ಹೇಳಿದರು.ಕರ್ನಾಟಕ ಜಾನಪದ ಪರಿಷತ್ತಿನ ಬಿಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರ ಗೊಳಸಂಗಿ ಸ್ವಾಗತಿಸಿದರು.ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಬೀಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್‌. ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಿಕ್ಷಕರಾದ ಚಿದಾನಂದ ಜಡಿಮಠ,ನಿಂಗರಾಜ ಕಂಠಿ,ಸಿದ್ದು ಸೋಮನಕಟ್ಟಿ, ಪಡಿಯಪ್ಪ ಕೊಟ್ನಳ್ಳಿ ಇದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು.ಅವಿನಾಶ ಜತ್ತಿ, ಶ್ರೀವರ ಗೋಳಸಂಗಿ ನಿರೂಪಿಸಿದರು.ನಂತರ   ಶಾಲೆಯ ಮಕ್ಕಳಿಂದ ಶರಣ ಸಾಂಸ್ಕೃತಿಕ ವೈಭವ ಮತ್ತು ಜಾನಪದ ಕಲಾಮಹೋತ್ಸವ ಸಂಭ್ರಮದಿಂದ ನಡೆಯಿತು. ಬೀಳಗಿ ತಾಲ್ಲೂಕಿನ ನಾಗರಾಳದಲ್ಲಿ ನಡೆದ ಶರಣ ಸಾಂಸ್ಕೃತಿಕ ವೈಭವ ಮತ್ತು ಜಾನಪದ ಕಲಾ ಮಹೋತ್ಸವವನ್ನು ಸಾಹಿತಿ ಚಂದ್ರಶೇಖರ ಕಾಳನ್ನವರ ಉದ್ಘಾಟಿಸಿದರು. ಶ್ರೀಗಳು ಹಾಗು ಗಣ್ಯರು ಉಪಸ್ಥಿತರಿದ್ದರು.