ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ಪಿಯುಸಿ ವಿಜ್ಞಾನ ಕಡ್ಡಾಯ: ಆದೇಶ ಹಿಂಪಡೆಯಲು ಆಗ್ರಹ
PUC science mandatory for paramedical courses: Demand to withdraw order
ಲೋಕದರ್ಶನ ವರದಿ
ಕೊಪ್ಪಳ 13: ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ದಾಖಲಾಗಲು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪೂರೈಸುವುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಹಿಂಪಡೆಯಲು ಎಐಡಿವೈಒ ಆಗ್ರಹ. ಅರೆ ವೈದ್ಯಕೀಯಕೋರ್ಸು ಗಳಿಗೆ ದಾಖಲಾಗಲು ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿರುವ ಆಲೈಡ್ ಮತ್ತು ಹೆಲ್ತ್‌ಕೇರ್ ರಾಷ್ಟ್ರೀಯ ಆಯೋಗದ ನಿರ್ಧಾರವನ್ನು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವಿರೋಧಿಸುತ್ತದೆ.
ಇದುವರೆಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆರೆ ವೈದ್ಯಕೀಯ (ಡಿಪ್ಲೊಮಾ) ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ನಂತರ ಪ್ರಯೋಗಾಲಯ ತಂತ್ರಜ್ಞಾನ, ವೈದ್ಯಕೀಯ ಪ್ರತಿಫಲನ, ಶಸ್ತ್ರಚಿಕಿತ್ಸಾ ತಂತ್ರಜ್ಞಾನ, ಡಯಾಲಿಸಿಸ್, ಆರೋಗ್ಯ ಸಹಾಯಕರು, ಫಿಸಿಯೋಥೆರಪಿ, ಕಣ್ಣಿನ ತಂತ್ರಜ್ಞಾನ, ಶರೀರ ಶಾಸ್ತ್ರ, ಅಂಗ ರಚನಾ ಶಾಸ್ತ್ರ, ಸೂಕ್ಷ್ಮಜೀವ ವಿಜ್ಞಾನ, ಸಮುದಾಯ ಓಷಧ, ರೋಗ ಶಾಸ್ತ್ರ, ವಿಧಿವಿಜ್ಞಾನಓಷಧ, ಜೀವ ರಸಾಯನ ಶಾಸ್ತ್ರ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಪೂರೈಸಿ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದರು.
ಎರಡು ಅಥವಾ ಮೂರು ವರ್ಷಗಳ ಉದ್ಯೋಗಾಧಾರಿತ ಆರೆ ವೈದ್ಯಕೀಯ ಕೋರ್ಸ್‌ಗಳನ್ನು ಪೂರೈಸಿದ ನಂತರ ಕೆಲವರು ಎರಡನೇ ವರ್ಷದ ಪದವಿ ಕೋರ್ಸ್‌ಗಳಿಗೆ ನೇರ ಪ್ರವೇಶ ಪಡೆಯುತ್ತಿದ್ದರು.ಆದರೆ ಈಗಿನ ಆದೇಶದಿಂದಗ್ರಾಮೀಣ ಪ್ರದೇಶದಯುವಜನರಿಗೆಇಂತಹ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಆರ್ಥಿಕ ಹೊರೆ ಹೆಚ್ಚುತ್ತದೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಇಂತಹ ಕೋರ್ಸುಗಳನನ್ನು ಓದುವುದೇ ಅಸಾಧ್ಯವಾಗುತ್ತದೆ.
ಇಂತಹ ಕೋರ್ಸುಗಳನ್ನು ಮುಗಿಸಿ ಉದ್ಯೋಗ ಪಡೆಯುವ ನೀರೀಕ್ಷೆಯಲ್ಲಿದ್ದ ಗ್ರಾಮೀಣ ಪ್ರದೇಶದ ಹಿಂದುಳಿದ ಅರ್ಥಿಕತೆಯ ಹಿನ್ನೆಲೆಯಿಂದ ಬರುವವರಿಗೆ ಇದ್ದ ಒಂದು ಅವಕಾಶವನ್ನು ಕಿತ್ತುಕೊಂಡಂತಾಗುತ್ತದೆ.ಅಲ್ಲದೆ ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಕಡಿಮೆಯಾಗಿ ಈಗ ಅಲ್ಲಿ ಕೆಲಸ ಮಾಡುತ್ತಿರುವಉಪನ್ಯಾಸಕರ ಕೆಲಸಗಳಿಗೂ ಕುತ್ತು ಬರಲಿದೆ.ಆದ್ದರಿಂದ, ಅಲೈಡ್ ಮತ್ತು ಹೆಲ್ತ್ ಕೇರ್ ರಾಷ್ಟ್ರೀಯ ಆಯೋಗವು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಎಐಡಿವೈಒ ಆಗ್ರಹಿಸುತ್ತದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 