ಪಿಎಂಜೆಜೆಬಿವೈ: 2ಲಕ್ಷ ರೂ ಪರಿಹಾರ ಧನ ವಿತರಣೆ
PMJJBY: Rs 2 lakh compensation distributed
ಹುಕ್ಕೇರಿ 23: ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಕೆನರಾ ಬ್ಯಾಂಕ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 2ಲಕ್ಷ ರೂ ಪರಿಹಾರ ಧನ ವಿತರಿಸಲಾಯಿತು. ಹುನ್ನೂರ ಗ್ರಾಮದ ರಾಯವ್ವಾ ಬಣಕಾರ ಅವರು ಉಳಿತಾಯ ಖಾತೆಯಲ್ಲಿ ಪಿಎಂಜೆಜೆಬಿವೈ ಜೀವವಿಮೆ ಪಡೆದಿದ್ದರು. ಅವರ ಅಕಾಲಿಕ ಮರಣದ ತರುವಾಯ ಫಲಾನುಭವಿ ಮೃತರ ತಾಯಿ ಮಾಯವ್ವಾ ಬಾಳಪ್ಪಾ ಪಿಸುತ್ರಿ ಅವರಿಗೆ ಪರಿಹಾರ ವಿತರಿಸಲಾಯಿತು.
ನವೆಂಬರ 19ರಂದು 2ಲಕ್ಷ ರೂ ಪರಿಹಾರ ವಿತರಿಸಿದ ಶಾಖೆಯ ಹಿರಿಯ ವ್ಯವಸ್ಥಾಪಕ ರಾಜೀವ ಅಶೋಕ ಪಾಟೀಲ ಮಾತನಾಡಿ ಬ್ಯಾಂಕಿನ ನಿಯಮಾನುಸಾರ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರ್ಮಿಕರು ಉಳಿತಾಯ ಖಾತೆ ತೆರೆದು ಬ್ಯಾಂಕಿನಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯುವಂತೆ ತಿಳಿಸಿದರು. ಭಾರತ ಸರಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಭದ್ರತೆಯನ್ನು ಸುರಕ್ಷಿತ ಮಾಡಿಕೊಳ್ಳುವಂತೆ ಕರೆ ನೀಡಿದರು. ಬ್ಯಾಂಕಿನ ಅಧಿಕಾರಿಗಳಾದ ಮಂಜುನಾಥ ಬಾವಕರ, ಅಭಯ ಮೋಹಿತೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 