ಮೂರು ತಿಂಗಳ ಬಾಡಿಗೆ ವಿನಾಯ್ತಿ ಘೋಷಿಸಿ ಪಿಎಂ ಗೆ ದುಂಬಾಲು

ಬೆಂಗಳೂರು,  ಏ 12, ಕರೋನ  ಸಂಕಷ್ಟ ಹಿನ್ನಲೆಯಲ್ಲಿ ಬಡವರ ತೊಂದರೆ  ನಿವಾರಿಸಲು ಸರ್ಕಾರ ಕಾಳಜಿ ತೋರಿ  ನೇರವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳ ಬಾಡಿಗೆ ವಿನಾಯ್ತಿ ಘೋಷಣೆ ಮಾಡಬೇಕು ಎಂದು  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ  ಆಗ್ರಹಪಡಿಸಿದ್ದಾರೆ . ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು  ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಆಯಾ ಮುಖ್ಯಮಂತ್ರಿಗಳೇ ಸ್ವಯಂ ತೀರ್ಮಾನ ತೆಗೆದುಕೊಂಡು ಬಾಡಿಗೆದಾರರ ಹಿತ ಕಾಯುತ್ತಿದ್ದಾರೆ ನಿಮ್ಮಿಂದಲೂ ದೇಶದ ಜನತೆ ಇದನ್ನು  ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.  ಇಂತಹ ವಿಷಮ ಸನ್ನಿವೇಶದಲ್ಲಿ ನೇರವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರೆ ಇಡಿ  ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳ ಬಾಡಿಗೆ ವಿನಾಯ್ತಿಯನ್ನು ಘೋಷಣೆ ಮಾಡಬೇಕು ಎಂದರು. ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಕರೋನ ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ದೆಹಲಿಯ ಸರಕಾರ ಮೂರು ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಣೆ ಮಾಡಿದೆ . ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು  ಪ್ರಧಾನಿ ಕೂಡಲೇ ಘೋಷಿಸಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.