ಪಿಕೆಪಿಎಸ್ ಚುನಾವಣೆ: ಶತಾಯುಷಿ ಬೋರಮ್ಮ ಮತದಾನ
PKPS elections: Centenarian Boramma votes
ತಾಳಿಕೋಟಿ 25: ತಾಲೂಕಿನ ಹಿರೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಸ್ಥಾನಕ್ಕೆ ಆಗಸ್ಟ್ 24ರಂದು ನಡೆದ ಚುನಾವಣೆಯಲ್ಲಿ ಶತಾಯುಷಿ ಬೋರಮ್ಮ ಬಾಪುಗೌಡ ಪಾಟೀಲ(102) ಅವರು ತಮ್ಮ ಮತವನ್ನು ಚಲಾಯಿಸಿದರು.
ಭಾನುವಾರ ಹಿರೂರ ಗ್ರಾಮದಲ್ಲಿ ನಡೆದ ಈ ಚುನಾವಣೆಯಲ್ಲಿ ಶತಾಯುಷಿ ಬೋರಮ್ಮ ಬಾಪುಗೌಡ ಪಾಟೀಲ ಎಂಬ ಈ ವೃದ್ಧೇಯೂ ತನ್ನ ಕುಟುಂಬದ ಸದಸ್ಯರ ಸಹಾಯದೊಂದಿಗೆ ಮತಗಟ್ಟೆಗೆ ಕಷ್ಟಪಟ್ಟು ತಲುಪಿ ತಮ್ಮ ಮತವನ್ನು ಚಲಾಯಿಸಿ ಈಗಿನ ಯುವ ಪೀಳಿಗೆಗೆ ಮಾದರಿಯಾದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಅತ್ಯಮೂಲ್ಯವಾದ ಹಕ್ಕು ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿರುವ ಪ್ರಜ್ಞಾವಂತ ಮತದಾರರೇ ತಮ್ಮ ಹಕ್ಕನ್ನು ಚಲಾಯಿಸಲು ಮನೆ ಬಿಟ್ಟು ಹೊರಗೆ ಬರುವುದಿಲ್ಲ ಆದರೆ ಗ್ರಾಮೀಣ ಭಾಗದಲ್ಲಿರುವ ಜನರು ಮತದಾನದಲ್ಲಿ ಹೆಚ್ಚು ಆಸಕ್ತಿಯಿಂದ ಮತಗಟ್ಟೆಗೆ ಬರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ತನ್ನ ಹಕ್ಕನ್ನು ಚಲಾಯಿಸುವುದರೊಂದಿಗೆ ಪ್ರಜ್ಞಾವಂತರಲ್ಲಿ ಈ ಶತಾಯುಷಿವೃದ್ಧೆಯೂ ಮತದಾನದ ಜಾಗೃತಿಯ ಪ್ರಶ್ನೆಯನ್ನು ಮೂಡಿಸಿದ್ದಾಳೆ ನಿಜವಾಗಲೂ ನಾವು ಅವಳಿಗೊಂದು ಹ್ಯಾಟ್ಸಾಪ್ ಹೇಳಲೇಬೇಕು.
ಈ ಸಮಯದಲ್ಲಿ ಮಾದೇವಿ ಎಸ್ ಪಾಟೀಲ, ಶಂಕರಗೌಡ ಪಾಟೀಲ, ಸಂಗನಗೌಡ ಅಸ್ಕಿ, ಸವಿತಾ ಸಂಗನಗೌಡ ಅಸ್ಕಿ,ಸೋಮನಗೌಡ ಅಸ್ಕಿ ಹಾಗೂ ಚಂದ್ರಶೇಖರ ಧನ್ನೂರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 