ರಾಣೇಬೆನ್ನೂರಲ್ಲಿ ದೇಶದ ಏಕತೆ ಪ್ರತಿಬಿಂಬಿಸಿದ ಸಂಸ್ಕೃತಿ ಪ್ರತಿಪಾದನೆಯ ಜಾನಪದ ಕಲಾ ನೃತ್ಯಗಳು: ಕೆ. ಎಸ್. ನಾಗರಾಜ
PKK Initiative - Mahashivratri Folk Vigil
ಪಿಕೆಕೆ ಇನಿಷಿಯೇಟಿವ್ - ಮಹಾಶಿವರಾತ್ರಿ ಜಾನಪದ ಜಾಗರಣೆ
ರಾಣೇಬೆನ್ನೂರು :16 ಭಾರತದ ಇತಿಹಾಸ ಬಹುತೇಕವಾಗಿ ಜಾನಪದ ಕಲಾ ಪರಂಪರೆಯ ಸಂಸ್ಕೃತಿಯ ತಳಹದಿಯ ಮೇಲೆ ನಿರ್ಮಾಣವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಇಲ್ಲಿನ ಅಶೋಕ ವೃತ್ತದಲ್ಲಿ ರವಿವಾರ ರಾತ್ರಿ ಮಹಾಶಿವರಾತ್ರಿ ಪ್ರಯುಕ್ತ, ಪಿಕೆಕೆ ಇನಿಶಿಯೇಟಿವ್ ಮತ್ತು ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಇಂಡಿಯಾ ಸಹಯೋಗದಲ್ಲಿ ನಡೆದ ಜಾನಪದ ಜಾಗರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿರುವ ಮಹಾನ್ ದೇಶ. ಬಹು ಕಲಾ ಪರಂಪರೆಯಲ್ಲಿ ದೇಶದ ಕಲಾವಿದರು ತಮ್ಮ ಬಹು ಸಂಸ್ಕೃತಿಯ ಕಲೆಯ ಮೂಲಕ ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.
ಜನಪದ ಕಲೆ ಕೇವಲ ಮನೋರಂಜನೆಯಲ್ಲ. ಗ್ರಾಮೀಣ ಪರಂಪರೆಯ, ಸಂಸ್ಕೃತಿಯ ಅವಿಭಾಜ್ಯ ಅಂಗ.
ಜಾನಪದಕ್ಕೆ ದೇಶ, ಭಾಷೆ, ಗಡಿ, ಯಾವುದೇ ಮೇರೆ ಇಲ್ಲ. ಬಹುಮಾಧ್ಯಮ ಕಲೆ ಮತ್ತು ಕಲಾವಿದರು. ಭಾರತದ ಸಂಸ್ಕೃತಿಯ ಹರಿಕಾರರು. ಕಲೆಗೆ ಸಾವಿಲ್ಲ ಎನ್ನುವುದಕ್ಕೆ ಇಂದು ಪ್ರದರ್ಶನವಾಗುತ್ತಿರುವ 5 ರಾಜ್ಯಗಳ ಜಾನಪದ ಕಲಾ ಸಂಸ್ಕೃತಿಯ ಕಲಾವಿದರೆ ಸಾಕ್ಷಿಯಾಗಿದ್ದಾರೆ ಎಂದರು.
ಆಧುನಿಕತೆ ಮತ್ತು ಪಾಚ್ಛಿಮಾತ್ಯ ಸಂಸ್ಕೃತಿ ವಿಜೃಂಭಿಸುತ್ತಿದ್ದರು ಸಹ, ನಾಡಿನ ಮತ್ತು ದೇಶದ ಜಾನಪದ ಕಲಾ ಸಂಸ್ಕೃತಿಗೆ ಎಂದಿಗೂ ಸಾವಿಲ್ಲ. ಎಂದು ವಿವರಿಸಿ ಮಾತನಾಡಿದ ಶಾಸಕರು, ಸಮಾಜ ಜಾನಪದ ಸಂಸ್ಕೃತಿಯ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದರ ಮೂಲಕ ಇತಿಹಾಸ ಪರಂಪರೆ ಮತ್ತಷ್ಟು ಉಳಿಸಿ ಬೆಳೆಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದರು.
ಗಣ್ಯ ವರ್ತಕ ಮಲ್ಲೇಶಪ್ಪ ಅರಿಕೇರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀಮತಿ ಯಶೋಧ ವಂಟಗೂಡಿ, ಆನಂದ ಗಡ್ಡದೇವರಮಠ,
ನಿಶಾರ್ಡ್ ಅಧ್ಯಕ್ಷ ಶ್ರೀಮತಿ ರುಕ್ಮಿಣಿ ಸಾಹುಕಾರ, ಪಿಕೆಕೆ ಇನಿಷಿಯೇಟಿವ್ ಯೋಜನಾ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಕೋಳಿವಾಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ಮಾಜಿ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ಮತ್ತಿತರ ಗಣ್ಯರು ಭಾರತದ ಜನಪದ ಕಲಾ ಸಂಸ್ಕೃತಿ ಮತ್ತು ಪರಂಪರೆ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಗಣ್ಯರಾದ ಇರ್ಫಾನ್ ದಿಡಗೂರ, ಚಂದ್ರ್ಪ ಬೇಡರ, ನಾಗರಾಜ ಕುಸಗೂರ, ರಾಜು ಮಾದಮ್ಮನವರ, ನಾಗರಾಜ ಮರಿಯಮ್ಮನವರ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ಅಂತರವಳ್ಳಿ ಗ್ರಾಮದ ಕರ್ನಾಟಕ ಕಲಾವಿದರ ಗೊಂಬೆಯಾಟ, ಯಕಲಾಸಪುರ ಕಲಾವಿದರ ಜಾನಪದ ನೃತ್ಯ, ಮಹಾರಾಷ್ಟ್ರ ಕಲಾವಿದರ ಲಾವಣಿ ನೃತ್ಯ, ಓಡಿಸ್ಸಾ ಕಲಾವಿದರ ಸಂಬಲ್ಪುರಿ ನೃತ್ಯ, ರಾಜಸ್ಥಾನದ ಚೇರಿ ಭವಾಯಿ ಅಕಲ್ ಬೇಲಿ ನೃತ್ಯ, ಛತ್ತೀಸ್ಗಡದ ಜೋಡಿ ಶಂಕು ನೃತ್ಯ ಸೇರಿದಂತೆ 300 ಕ್ಕೂ ಹೆಚ್ಚು ಕಲಾವಿದರ ವಿಶೇಷ ಮತ್ತು ವಿಶಿಷ್ಟ ನೃತ್ಯಗಳು ವಾಣಿಜ್ಯ ನಗರದ ಸಾವಿರಾರು ನಾಗರಿಕರ ಮನತಣಿಸಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 