ಅಪ್ರಾಪ್ತನ ಕೈಗೆ ಬೈಕ್ ನೀಡಿದ ಮಾಲಕನಿಗೆ ೨೫ ಸಾವಿರ ದಂಡ

ಅಪ್ರಾಪ್ತನ ಕೈಗೆ ಬೈಕ್ ನೀಡಿದ ಮಾಲಕನಿಗೆ ೨೫ ಸಾವಿರ ದಂಡ Owner fined Rs 25,000 for giving bike to minor

ಕೊಲ್ಹಾರ ೧೪: ಅಪ್ರಾಪ್ತ ಬಾಲಕನ ಕೈಗೆ ಬೈಕ್ ನೀಡಿದ ಬೈಕ್ ಮಾಲಕನಿಗೆ ಬಸವನ ಬಾಗೇವಾಡಿ ಜೆಎಂಎಫ್‌ಸಿ ನ್ಯಾಯಾಲಯ ೨೫ ಸಾವಿರ ದಂಡ ವಿಧಿಸಿದ ಘಟನೆ ಜರುಗಿದೆ.

ತಾಲೂಕಿನ ಕೂಡಗಿ ೧೮ ನೇ ಕ್ರಾಸ್ ಬಳಿ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸುತ್ತಿದ್ದ. ಕರ್ತವ್ಯದಲ್ಲಿದ್ದ ಕೂಡಗಿ ಠಾಣೆ ಪಿಎಸ್‌ಐ ಯತೀಶ್ ಕೆ ಎನ್ ಅವರು ಅಪ್ರಾಪ್ತ ಬಾಲಕನ ಬೈಕ್ ತಡೆದು ಬಾಲಕನಿಂದ ಮಾಹಿತಿ ಪಡೆದು ಬೈಕ್ ಮಾಲೀಕನಿಗೆ ಜೂನ್ ೧೨ ರಂದು ಸಿಸಿನಂ ೨೪೩/೨೦೨೬ ರಂತೆ ಸದರಿ ವಾಹನ ಮಾಲೀಕನಾದ ಜಗದೀಶ ತಡಕಲ್ಲ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 

ಪ್ರಕರಣ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಬೈಕ್ ಮಾಲೀಕನಿಗೆ ೨೫ ಸಾವಿರ ದಂಡ ವಿಧಿಸಿ ೬ ತಿಂಗಳ ವರೆಗೆ ನೋಂದಣಿ ಪತ್ರ (ಖಅ) ವಜಾ ಮಾಡಲಾಗಿದೆ ಮತ್ತು ವಾಹನ ಚಲಾವಣೆ ಮಾಡಿದ ಅಪ್ರಾಪ್ತ ಬಾಲಕನಿಗೆ ೧೯ ವಯಸ್ಸಿನವರೆಗೆ ವಾಹನ ಪರವಾನಗಿ ನೀಡದಂತೆ ಆದೇಶಿಸಿದೆ.