ನೈಋತ್ಯ ಚೀನಾದಲ್ಲಿ ಉರುಳಿಬಿದ್ದ ಟ್ರಕ್ : ಏಳು ಮಂದಿ ದುರ್ಮರಣ

     ಕುನ್ಮಿಂಗ್, ಡಿ 8:     ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದಲ್ಲಿ ಹೆದ್ದಾರಿಯಲ್ಲಿ ಭಾರಿ ಟ್ರಕ್ ತಲೆಕೆಳಗಾದ ಪರಿಣಾಮ ಏಳು ಜನರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ವೆನ್ಷಾನ್ ನಗರದಲ್ಲಿ ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿನ ರಕ್ಷಣಾ ತಡೆಗೋಡೆಗೆ ಟ್ರಕ್ ಗುದ್ದಿದ ಪರಿಣಾಮ ಉರುಳಿ ಬಿದ್ದಿದ್ದು ಟ್ರಕ್ ಕೆಳಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಚಿಕ್ಕ ಕಾರ್ ಹಾಗೂ ದ್ವಿಚಕ್ರವಾಹನ ಸಿಲುಕಿಹಾಕಿಕೊಂಡಿದೆ. ಈ ದುರ್ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ. ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.