ಮಾಸ್ಕೋ, ಜನವರಿ 31,ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ (ಡಿಆರ್ ಕಾಂಗೋ) ಪೂರ್ವ ಭಾಗದಲ್ಲಿ ನಡೆದ ಸರಣಿ ದಾಳಿಯಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಉತ್ತರ ಕಿವು ಪ್ರಾಂತ್ಯದ ಬೆನಿ ಪ್ರದೇಶದಲ್ಲಿ ಈ ದಾಳಿಗಳು ನಡೆದಿದ್ದು, ಸಂಯುಕ್ತ ಡೆಮಾಕ್ರಟಿಕ್ ಪಡೆಗಳು (ಎಡಿಎಫ್) ಗುಂಪು ಈ ಕೃತ್ಯ ಎಸಗಿದೆ ಎಂದೂ ವರದಿಯಾಗಿದೆ .
ಮಂಟುಂಬಿಯ ವಸಾಹತು ಪ್ರದೇಶದಲ್ಲಿ ಮೊದಲ ದಾಳಿ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದಾರೆ, ಮತ್ತೊಂದು ದಾಳಿಯಲ್ಲಿ . ಮುಲೋಲ್ಯರ ವಸಾಹತು ಪ್ರದೇಶದಲ್ಲಿ ಮೂವರು ಮತ್ತು ಅವೆಲಿಯಲ್ಲಿ ಇನ್ನೂ ಒಬ್ಬರು ಮೃತಪಟ್ಟಿದ್ದಾರೆ. ಮಾಮೋವ್‌ನಲ್ಲಿ ಒಂದು ಮನೆಗೆ ಬೆಂಕಿ ಹಚ್ಚಲಾಗಿದೆ. ಡಿಆರ್ ಕಾಂಗೋ ಬಹಳ ಹಿಂದಿನಿಂದಲೂ ಪಶ್ಚಿಮ ಉಗಾಂಡಾದಲ್ಲಿ ಸರ್ಕಾರವನ್ನು ವಿರೋಧಿಸಲು ರೂಪುಗೊಂಡ ಎಡಿಎಫ್ ವಿರುದ್ಧ ಹೋರಾಡುತ್ತಿದೆ. ಈ ಗುಂಪನ್ನು ಉಗಾಂಡಾದ ಭಯೋತ್ಪಾದಕ ಸಂಘಟನೆ ಎಂದೂ ಪರಿಗಣಿಸಲಾಗಿದೆ.