ಇರಾನ್ ದಾಳಿಯಿಂದ 100ಕ್ಕೂ ಹೆಚ್ಚು ಯೋಧರ ಮೆದುಳಿಗೆ ಹಾನಿ; ಅಮೆರಿಕ

ವಾಷಿಂಗ್ಟನ್, ಫೆ 11, ಇರಾಕ್ ನಲ್ಲಿ ನಿಯೋಜಿಸಲ್ಪಟ್ಟಿದ್ದ ಅಮೆರಿಕದ ಸೇನಾ ನೆಲೆಯ ಮೇಲೆ ಕಳೆದ ತಿಂಗಳು ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ 100 ಕ್ಕೂ ಹೆಚ್ಚು ಸೈನಿಕರ ಮೆದುಳಿಗೆ ಹಾನಿಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಸೋಮವಾರ ತಿಳಿಸಿದೆ. ಇಲ್ಲಿಯವರೆಗೆ 109 ಅಮೆರಿಕ ಯೋಧರಲ್ಲಿ ಮೆದುಳಿನ ಹಾನಿ ಕಾಣಿಸಿಕೊಂಡಿದೆ. ಇವರಲ್ಲಿ 76 ಜನರು ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಇಲಾಖೆಯ ಹೇಳಿಕೆ ಮಾಹಿತಿ ನೀಡಿದೆ. 

ಜೊತೆಗೆ, 27 ಜನರನ್ನು ತಪಾಸಣೆಯ ನಂತರ ಜರ್ಮನಿಗೆ ವರ್ಗಾಯಿಸಲಾಗಿದ್ದು, ಕೆಲವರು ಮತ್ತೊಮ್ಮೆ ಅಮೆರಿಕಕ್ಕೆ ವರ್ಗಗೊಂಡಿದ್ದಾರೆ. ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್ ನ ಹಿರಿಯ ಕಮಾಂಡರ್ ಕಾಸೆಮ್ ಸೊಲೈಮನಿ ಹತ್ಯೆಗೀಡಾದ ನಂತರ ಇರಾನ್, ಇರಾಕ್ ನಲ್ಲಿದ್ದ ಅಮೆರಿಕದ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ, ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಅನೇಕರಿಗೆ ಮೆದುಳು ಹಾಗೂ ನರಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ.