ತಾಳಿಕೋಟಿಯಲ್ಲಿ ಆಕ್ರೋಶ ಸ್ಫೋಟ: 29ನೇ ದಿನಕ್ಕೂ ಧರಣಿ ಮುಂದುವರಿಕೆ ಹಿ ಉಗ್ರ ಹೋರಾಟದ ಎಚ್ಚರಿಕೆ
Outrage erupts in Talikoti: Protest continues for 29th day, warning of violent struggle
ತಾಳಿಕೋಟಿ 24: ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಜನರ ಆಕ್ರೋಶ ತಾರಕಕ್ಕೇರಿದ್ದು, ಕಳೆದ 29 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮತ್ತಷ್ಟು ತೀವ್ರಗೊಂಡಿದೆ.
ಹೋರಾಟ ಸಮಿತಿಯ ಉಪಾಧ್ಯಕ್ಷ ರಾಮಣ್ಣ ಕಟ್ಟಿಮನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ತಾಲೂಕಿನ ಜನರು 29 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡದೇ ಇರುವುದು ಜನರನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಇದು ಇಡೀ ತಾಲೂಕಿನ ಜನತೆಗೆ ಮಾಡುತ್ತಿರುವ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಳಿಕೋಟಿ ಪಟ್ಟಣದ ಎಲ್ಲಾ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವ ಈ ಹೋರಾಟ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜನರ ಸಹನೆಯ ಮಿತಿ ಮೀರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಕಠಿಣಗೊಳಿಸುವ ಎಚ್ಚರಿಕೆಯನ್ನು ಸಮಿತಿ ನೀಡಿದೆ. ಇವತ್ತಿನ ಧರಣಿ ಸತ್ಯಾಗ್ರದಲ್ಲಿ ಮಹಿಳೆಯರು ಕೂಡಾ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಗೌರವ ಅಧ್ಯಕ್ಷ ಎಸ್ ಬಿ ಕಟ್ಟಿಮನಿ, ಕಾರ್ಯಧ್ಯಕ್ಷ ಆರ್ ಎಸ್ ಪಾಟೀಲ( ಕೂಚಬಾಳ ) ಉಪಾಧ್ಯಕ್ಷರಾದ ಮುತ್ತಪ್ಪ ಚಮಲಾಪುರ, ಮಾಸೂಮಸಾಬ್ ಕೆಂಭಾವಿ. ವಿಜಯಸಿಂಗ್ ಹಜೇರಿ, ಮೆಹೆಬುಬ್ ಚೋರಗಸ್ತಿ, ಮುರಿಗೆಪ್ಪ ಸರಶೆಟ್ಟಿ, ಪರಶುರಾಮ ತಂಗಡಗಿ, ದತ್ತು ಹೇಬಸೂರ ಕಾಶೀನಾಥ ಸಜ್ಜನ , ರಾಜು ಹಂಚಾಟೆ, ಸುರೇಶ ಹಜೇರಿ, ಕಸ್ತೂರಿಬಾಯಿ ಪೂಜಾರಿ, ಮಲ್ಲಮ್ಮ ಲಿಂಗದಹಳ್ಳಿ, ಶಕುಂತಲಾ ಕರೀಬಾವಿ, ಸಾವಿತ್ರಿ ಪಾಟೀಲ, ಕವಿತಾ ದೊಡಮನಿ, ಪ್ರಕಾಶ ಹಜೇರಿ, ರಾಜು ಸಜ್ಜನ, ನಾಗೇಶ ಕಟ್ಟಿಮನಿ, ಮಂಜುನಾಥ ಶೆಟ್ಟಿ, ಮಲ್ಲು ಮೇಟಿ, ತಿಪ್ಪಣ್ಣ ಸಜ್ಜನ, ಗೋವಿಂದಸಿಂಗ ಗೌಡಗೇರಿ ಕಳಕೂಸಾ ರಂಗರೇಜ್, ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ ಹಾಗೂ ತಾಲೂಕಿನ ಅನೇಕರು ಹಾಜರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 