ಸಾರ್ವಭೌಮ ಸಮಾನತೆಯ ದೇಶ ನಮ್ಮದು: ಮಲ್ಲಿಕಾರ್ಜುನ ಅರಬಿ

Ours is a country of sovereign equality: Mallikarjuna Arabi

ಸಾರ್ವಭೌಮ ಸಮಾನತೆಯ ದೇಶ ನಮ್ಮದು: ಮಲ್ಲಿಕಾರ್ಜುನ ಅರಬಿ 

ರನ್ನ ಬೆಳಗಲಿ 27: ಸಂವಿಧಾನದಲ್ಲಿ ಪ್ರತಿಪಾದಿಸಿರುವ ನ್ಯಾಯ,ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಹಾಗೂ ನಮಗೆ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಗೌರವಿಸುವುದು ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹನೀರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆ ಬೀರಸಿದ್ದೇಶ್ವರ ನಗರ ಶಿರೋಳ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಅರಬಿ ಗಣರಾಜ್ಯೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಿದ್ದಪ್ಪ ಕುರಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭಾಶಯ ಹೇಳಿದರು.ವಿಶೇಷ ಅತಿಥಿಗಳಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ದುಂಡಪ್ಪ ಯರಗಟ್ಟಿ ಹಾಗೂ ಬಾಗಲಕೋಟೆ ಜಿಲ್ಲೆ ಅಧ್ಯಕ್ಷರಾದ ಅಶೋಕ ಗೊಲಾಂಡಿ,ಕಾಡಪ್ಪ ಕುರಿ ಅವರು ಲೇಖನ ಸಾಮಗ್ರಿಗಳಾದ ಪುಸ್ತಕ, ಪೆನ್ನು, ಪೆನ್ಸಿಲ್ ಗಳನ್ನು ಶಾಲೆಯ ಎಲ್ಲ ಮಕ್ಕಳಿಗೆ ವಿತರಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಸಲಹೆ ನೀಡಿದರು, 

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ಕಾಮಣ್ಣ ಮಹಾಲಿಂಗಪುರ ಶಾಲಾ ಮಕ್ಕಳು ಬಿಸಿಯೂಟ ಸವಿಯಲು 50 ಊಟದ ತಟ್ಟೆಗಳನ್ನು ದೇಣಿಗೆಯಾಗಿ ನೀಡಿದರು ಲೇಖನ ಸಾಮಗ್ರಿಗಳು ಹಾಗೂ ಊಟದ ತಟ್ಟೆಗಳನ್ನು ದೇಣಿಗೆ ನೀಡಿದ ಮಹನೀಯರಿಗೆ ಶಾಲೆಯ ಎಸ್ ಡಿ ಎಮ್ ಸಿ ಬಳಗದವರು ಗೌರವ ಸನ್ಮಾನ ಮಾಡಿದರು. ಉತ್ತಮ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಯವರಾದ ಚೈತ್ರಾ ಉಳ್ಳಾಗಡ್ಡಿ ಮಹಾದೇವಿ ಕುಳಲಿ ಅಂಗನವಾಡಿ ಶಿಕ್ಷಕಿ ಸುವರ್ಣ ತಳಗೇರಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಕ್ಕಳಿಂದ ಭಾಷಣ, ದೇಶಭಕ್ತಿ ಗೀತೆಗಳು, ರಾಷ್ಟ್ರ ನಾಯಕರ ಡೈಲಾಗ್ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಕಾರ್ಯಕ್ರಮವನ್ನು ಶಿಕ್ಷಕರಾದ ಬಸವರಾಜ ಕಡಪಟ್ಟಿ ನಡೆಸಿಕೊಟ್ಟರು ಸಿದ್ದಪ್ಪ ಹುಲ್ಯಾಳ ಕಾಡಪ್ಪ ಕುರಿ ಬಸಪ್ಪ ಕುಳಲಿ ಸುರೇಶ ಮಹಾಲಿಂಗಪುರ ಲಕ್ಕಪ್ಪ ಕೋಟಿ ಸೋನವ್ವ ಮಟಗಾರ ಮಹಾನಂದ ಹಂಚಿನಾಳ ಅಮರ ಮಾಂಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.