ಜಮಖಂಡಿ 28: ವಿಜಯಪುರ ನಗರದಲ್ಲಿ ನಡೆದ ಇಟ್ಟಿಗೆ ಭಟ್ಟಿ ಮಾಲೀಕರಿಂದ ದಲಿತ ಕಾರ್ಮಿಕರ ಮೇಲೆ ಹಲ್ಲೆ ಅಮಾನುವಿಯ ಕೃತ್ಯವಾಗಿದ್ದು. ರಾಜ್ಯದ ಜನತೆ ತಲೆತಗ್ಗಿಸುವಂತೆ ಆಗಿದ್ದು. ಹಲ್ಲೆ ಮಾಡಿರುವ ಮುಖ್ಯ ಐದು ಆರೋಪಿಗಳು ಸೇರಿದಂತೆ ಇನ್ನುಳಿದ ಹತ್ತು ಜನರ ಆಸ್ತಿಯನ್ನು ಮುಟ್ಟುಗೊಲು ಹಾಕಿ. ಗಡಿಪಾರ ಮಾಡಬೇಕೆಂದು ದಲಿತ ಸಂಘಟನೆಯ ಮುಖಂಡ ಸುರೇಶ ನಡುವಿನಮನಿ ಒತ್ತಾಯಿಸಿದರು.
ನಗರದ ಎ,ಜಿ,ದೇಸಾಯಿ ಸರ್ಕಲ್ನಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟದಿಂದ ಮಾನವ ಸರಪಳ್ಳಿಯ ಮೂಲಕ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ನಡೆಸಿ, ತಹಶೀಲ್ದಾರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲಿಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಚಿಕ್ಕಲಕಿ ಗ್ರಾಮದ ದಲಿತ ಕಾರ್ಮಿಕರಾದ ಸದಾಶಿವ ಚಂದ್ರ್ಪ ಮಾದರ, ಸದಾಶಿವ ಬಸಪ್ಪ ಬಬಲಾದಿ, ಉಮೇಶ ಮಾಳಪ್ಪ ಮಾದರ ಮೂರು ಜನ ಕೂಲಿ ಕಾರ್ಮಿಕರು ಸಂಕ್ರಾಂತಿ ಹಬ್ಬದ ಆಚರಣೆಗೆ ಊರಿಗೆ ಹೋಗಿದ್ದ ಕಾರ್ಮಿಕರು, ಹಿಂದಿರುಗುವುದು
ತಡವಾಗಿದ್ದಕ್ಕೆ ನಾಲ್ಕು ದಿನಗಳವರೆಗೆ ನಿರಂತರವಾಗಿ ಮೂವರ ಜನ ಕಾರ್ಮಿಕರ ೆ ಪಾದಗಳಿಗೆ ಕಟ್ಟಿಗೆ ಪೈಪ್ಗಳಿಂದ ಹೊಡೆದು ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಮಾಡಿರುವ ಇಟ್ಟಿಗೆ ಬಟಿ ಮಾಲಿಕ ಖೇಮು ರಾಠೋಡ, ರೋಹನ ಖೇಮು ರಾಠೋಡ, ಸಚಿನ ಮಾನವರ, ವಿಶಾಲ ಜುಮನಾಳ, ಕನಕಮೂರ್ತಿ ಜ್ಞಾನದೇವ ಗೊಂದಳಿ ಹಾಗೂ ಇನ್ನೂ 10 ಜನ ತಂಡ ಹಲ್ಲೆಯನ್ನು ಮಾಡಿದ್ದಾರೆ. ಇಂತಹ ಕೃತ್ಯವನ್ನು ವೆಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಇಟಂಗಿ ಬಟ್ಟಿಗಳನ್ನು ಬಂದ ಮಾಡಬೇಕು. ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿರುವದನ್ನು ಕಂಡು. ಎಚ್ಚೆತ್ತ ಪೊಲೀಸ್ ಇಲಾಖೆ ವಿಜಯಪುರ ಎಪಿಎಂಸಿ ಪೊಲೀಸ್ ಠಾಣಾ ಪಿಎಸ್ಐ 3 ದಿನ ಕಳೆದರು ಅಪರಾಧಿಗಳನ್ನು ಠಾಣೆಗೆ ಕರೆಸಿ ವಿಚರಿಸದೆ ಯಾವುದೋ ಒತ್ತಡಕ್ಕೆ ಮಣಿದು ಬಿಟ್ಟು ಕಳಿಸಿದ್ದಾರೆ, ಈ ರೀತಿ ಮಾಡುವುದಕ್ಕೆ ರಾಜಕೀಯ ಒತ್ತಡವೂ ಅಥವಾ ಆರ್ಥಿಕ ಬಲದಿಂದ ತಿಳಿತಾಯಿಲ್ಲ, ಹಲ್ಲೆ ಮಾಡಿದ ದೃಶ್ಯಗಳು ವಾಟ್ಸಾಪ್ ಫೇಸ್ ಬುಕ್ ಟಿವಿಯಲ್ಲಿ ಬಿತ್ತರಿಸುತ್ತಿದ್ದಂತೆ ಎಚ್ಚತ್ತುಕೊಂಡ ಪೊಲೀಸ್ ಇಲಾಖೆ ಅಪರಾಧಿಗಳನ್ನು ಬಂಧಿಸಿದ್ದಾರೆ, ಅದರಲ್ಲಿ ಒಂದಿಷ್ಟು ಜನ ಪರಾರಿಯಾಗಿದ್ದಾರೆ ಹಲ್ಲೆಗೆ ಸಂಬಂಧಿಸಿದ ಐವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇನ್ನು ಹತ್ತು ಜನರ ತಂಡದ ಆರೋಪಿಗಳಿಗಾಗಿ ಪೊಲೀಸ್ ಇಲಾಖೆಯ ಶೋಧ ಮಾಡುತ್ತಿದೆ ಹಲ್ಲೆಗೊಳಗಾದ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಪ್ರತಿ ಕುಟುಂಬಕ್ಕೆ ಸರ್ಕಾರ 5 ಎಕರೆ ಜಮಿನು ನೀಡಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಸರ್ಕಾರ ಪ್ರತಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೂಡಿಸಬೇಕು, ಖೇಮು ರಾಠೋಡ್ ಅವರ ಇಟಂಗಿಬಟ್ಟೆಯನ್ನು ಸರಕಾರ ಮುಟ್ಟುಗೋಲ ಹಾಕಿಕೊಳ್ಳಬೇಕು, ಇಟಂಗಿಬಟ ಮಾಲೀಕರು ಹಲ್ಲೆ ಮಾಡಿದ ವ್ಯಾಘ್ರು ಖೇಮು ರಾಠೋಡ್ ಹಾಗೂ ನಾಲ್ಕು ಜನರನ್ನು ಸೇರಿ ಇದರಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಬೇಕು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಅನದಿಕೃತವಾಗಿ ನಡೆಯುತ್ತಿರುವ ಇಟಂಗಿ ಬಟಿಗಳನ್ನು ಕೂಡಲೇ ಬಂದ್ ಮಾಡಿ ಅವರ ಮೇಲೆ ಕಾನೂನ ಕ್ರಮ ಜರುಗಿಸಬೇಕೆಂದು ತಾಲೂಕಾ ದಲಿತ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಿದ್ದು ಮೀಶಿ, ಮುತ್ತಣ್ಣ ಮೇತ್ರಿ, ರಮೇಶ್ ಬಾಳೋಲಗಿಡದ ಮಾತನಾಡಿದರು, ಪುಟ್ಟು ಪಾಣಿ, ಪ್ರೇಮಾ ಬಳೋಲಗಿಡದ, ಸಂಜು ಮುಂಡಗನೂರ, ರಮೇಶ ಪೂಜಾರಿ, ರವಿ ದೊಡ್ಡಮನಿ, ಮಾರುತಿ ಮರೇಗುದ್ದಿ, ಪ್ರಕಾಶ ಹುಗ್ಗಿನ್ನವರ, ಬಸು ಬುದ್ನಿ, ಸಂಗಮೇಶ ಕಾಂಬಳೆ, ಸಿದ್ದು ಸತ್ಯನ್ನವರ, ಸಂತೋಷ ನಾಟಿಕಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.