ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯ : ಜಗದೀಶ ಶಟ್ಟರ

ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯ : ಜಗದೀಶ ಶಟ್ಟರ Our society can only develop if we all move forward together: Jagadish Shattara

ಮುದ್ದೇಬಿಹಾಳ  29:ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯವಾಗುತ್ತದೆ. ಸಮಾಜ ಸಂಘಟನೆಯಲ್ಲಿ ತಾಲೂಕಾ ಸೇರಿದಂತೆ ತಲಹದಿಯಲ್ಲಿರುವ ಸಮಾಜದ ಘಟಕಗಳು ಕಾರ್ಯನಿರ್ವಹಣೆಯಲ್ಲಿ ಮೊದಲಾದಾಗ ಬಣಜಿಗ ಸಮಾಜ ಏಳಿಗೆ ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಸಂಸದ ಜಗದೀಶ ಶಟ್ಟರ ಹೇಳಿದರು.ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ, ಪ್ರತಿಭಾ ಪುಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡುತ್ತಿರುವ ಸಮಾಜವೆಂದರೆ ಬಣಜಿಗ ಸಮಾಜವಾಗಿದೆ.  

ಸಮಾಜವು ಯಾವುದೇ ಜಾತಿಭೇದ ಮಾಡದೇ ಎಲ್ಲಾ ಸಮಾಜದವರೊಂದಿಗೆ ಸೌಹಾರ್ದತೆಯಿಂದ ಇರುವುದರಿಂದಲೇ ರಾಜ್ಯದ 9 ಜನ ಮುಖ್ಯಮಂತ್ರಿಗಳಲ್ಲಿ ಬಣಜಿಗ ಸಮಾಜದವರೇ 7 ಜನ ಮುಖ್ಯಮಂತ್ರಿಗಳಾಗಿದ್ದಾರೆ. ಇದಕ್ಕಾಗಿಯೇ ಸಮಾಜಕ್ಕೆ ಜನರು ಗೌರವ ನೀಡುತ್ತಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಕರೆಯ್ದೊಯುವ ಕಾರ್ಯ ನಡೆಯಬೇಕಿದೆ ಎಂದು ಅವರು ಹೇಳಿದರು.ಸಮಾಜ ಶಕ್ತಿ ತೋರಿಸಬೇಕಿದೆ:ಕರ್ನಾಟಕದ ನೆರೆ ರಾಜ್ಯಗಳಲ್ಲಿ ಬಣಜಿಗ ಸಮಾಜದವರು ಸಾಕಷ್ಟು ಜನರಿದ್ದಾರೆ. ನೆರೆ ರಾಜ್ಯದ ಸಮಾಜದವರು ಒಗ್ಗಟ್ಟಿನಿಂದ ಕೂಡಿ ಸಮಾಜದ ಆರ್ಥಿಕ ಹೀನ ಕುಟುಂಬಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಈಗಾಗಲೇ ಬಳ್ಳಾರಿ, ಬೀಳಗಿಯಲ್ಲಿಯೂ ಸಮಾಜದ ಸಂಘದಿಂದ ಸಹಕಾರಿ ಬ್ಯಾಂಕಗಳನ್ನು ತೆರೆದು ಬಡ ಕುಟುಂಭಸ್ಥರಿಗೆ ಆರ್ಥಿಕ ಬೆಂಬಲವನ್ನು ನೀಡಿ ಅವರನ್ನು ಎಲ್ಲರಂತೆ ಸಮಾಜದಲ್ಲಿ ಜೀವನ ನಡೆಸುವ ಕಾರ್ಯ ಮಾಡುತ್ತಿದ್ದಾರೆ.  

ಇಂತಹ ಕಾರ್ಯ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಯಬೇಕಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದು ನೊಂದಾಯಿಸಿ:ವೀರಶೈವ ಲಿಂಗಾಯತ ಸಮಾಜದಲ್ಲಿ ರೆಡ್ಡಿ, ಪಂಚಮಸಾಲಿ, ಬಣಜಿಗ ಸೇರಿದಂತೆ ಇನ್ನಿತರ ಸಮಾಜದವರು ವಿವಿಧ ಸಂಘಟನೆಯನ್ನು ಕೈಗೊಂಡು ಸಮಾವೇಶಗಳನ್ನು ಮಾಡಿದರೂ ವೀರಶೈವ ಸಮಾಜದ ಒಂದೇ ಎನ್ನುವ ಗುರಿ ಇರಬೇಕು. ಸದ್ಯಕ್ಕೆ ನಡೆಯುತ್ತಿರುವ ರಾಜ್ಯ ಸರಕಾರದ ಸಮೀಕ್ಷೆಯಲ್ಲಿ ದರ್ಮ ಹಿಂದು ಜಾತೀವೀರಶೈವ ಹಾಗೂ ಉಪ ಜಾತಿಯಲ್ಲಿ ಬಣಜಿಗ, ರೆಡ್ಡಿ, ಪಂಚಮಸಾಲಿ ಸೇರಿದಂತೆ ಇನ್ನಿತರ ಸಮಾಜದ ಉಪ ಜಾತಿಯ ಹೆಸರನ್ನು ನೊಂದಾಯಿಸಬೇಕು ಎಂದು ಅವರು ಕರೆ ನೀಡಿದರು.ಶಾಸಕ ಹಾಗೂ ಸಾಬೂನ ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಸಿ.ಎಸ್‌.ನಾಡಗೌಡ ಮಾತನಾಡಿ, ಎಲ್ಲಾ ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಬಣಜಿಗ ಸಮಾಜದವರೇ ಮುಂಚುಣಿಯಲ್ಲಿರುವದನ್ನು ಯಾರೂ ಅಲ್ಲಗಳಿಯುವಂತಿಲ್ಲ. ರಾಜಕೀಯ ರಂಗದಲ್ಲಿ ಅತೀ ಹೆಚ್ಚು ಶಾಸಕರಾಗಿದ್ದು ಬಣಜಿಗ ಸಮಾಜದವರು. ಆದರೆ ಇಂದು ವೀರಶೈವನೇ ಬೇರೆ ಲಿಂಗಾಯತವೇ ಬೇರೆ ಎಂಬ ಹೇಳಿಕೆಗಳು ಕೇಳಿಬರುತ್ತಿದೆ. ಇದರಿಂದ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ನಾವು ಯೋಚಿಸುತ್ತಿಲ್ಲ.  

ವೃತ್ತಿಯ ಮುಖಾಂತರ ನಮ್ಮ ಉಪ ಜಾತಿಯನ್ನು ಬರೆಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಬಹಳಷ್ಟು ಹಿನ್ನಡೆಯಾಗಲಿದೆ. ಆದ್ದರಿಂದ ಎಲ್ಲರೂ ಜಾತಿಯಲ್ಲಿ ವೀರಶೈವ ಲಿಂಗಾಯತ ಎಂದೇ ನಮೋಧಿಸಿ. ಇದರಿಂದ ಈಗಾಗಲೇ 7 ಜನ ಮುಖ್ಯಮಂತ್ರಿಗಳನ್ನು ನೀಡಿರುವ ಬಣಜಿಗರ ಸಮಾಜಕ್ಕೆ ಮುಂದಿನ ದಿನಮಾನದಲ್ಲಿ ಇನ್ನೂ 7 ಜನ ಮುಖ್ಯಮಂತ್ರಿಗಳನ್ನು ನೀಡುವ ಶಕ್ತಿ ದೊರಕುತ್ತದೆ. ಮುದ್ದೇಬಿಹಾಳ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ ಕುಡಿಯುವ ನೀರಿಗಾಗಿ 9.5ಕೋಟಿ ನೀಡಿದರೆ ಹಾಗೂ ಜಗದೀಶ ಶೇಟ್ಟರ ಚಿಮ್ಮಲಗಿ ಲಿಫ್ಟ್‌ ನೀರಾವರಿಗಾಗಿ ಕ್ಷೇತ್ರದಲ್ಲಿ ಧ್ವನಿ ಎತ್ತಿದಾಗ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸಿದರು ಎಂದು ಅವರು ಹೇಳಿದರು. 

ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿ, ಬಣಜಿಗ ಸಮಾಜಕ್ಕೆ 2ಎ ಮೀಸಲಾಯಿತಿ ದೊರಕುವಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೇಟ್ಟರ ಅವರ ಶ್ರಮ ಬಹಳಷ್ಟಿದೆ. ಅಲ್ಲದೇ ಮುದ್ದೇಬಿಹಾಳ ಕ್ಷೇತ್ರದಲ್ಲಿ ನೀರಾವರಿ ಯೋನೆಗಳಿಗೆ 1800ಕೋಟಿ ಅನುದಾನ ನೀಡಿ ಚಿಮ್ಮಲಗಿ ಏತ ನೀರಾವರಿಗೆ ಚಾಲನೆ ನೀಡಿದ ವ್ಯಕ್ತಿ ಅವರಾಗಿದ್ದಾರೆ ಎಂದು ಅವರು ಹೇಳಿದರು.ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಸಾಹಿತಿ ಅಶೋಕ ಹಂಚಿಲಿ ಅವರು ಸಮಾಜದ ಕೊಡುಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರುದ್ರೇಶ ಕಿತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಚಟ್ಟೇರ ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಸಮಾಜದ ನಿವೃತ್ತ ನೌಕರರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ತಾಲೂಕಾ ಘಟಕದ ಗೌರವಾಧ್ಯಕ್ಷ ಎಂ.ಎಸ್‌.ನಾವದಗಿ, ಪ್ರ.ಕಾರ್ಯದರ್ಶಿ ರಾಜು ಬೊಳ್ಳೊಳ್ಳಿ, ಬಸವರಾಜ ಮೋಟಗಿ, ಮಹಾಂತಪ್ಪ ನಾವದಗಿ, ಸಂಗಮೇಶ ನಾವದಗಿ, ಬಸವರಾಜ ಚಿನಿವಾರ, ಬಸವರಾಜ ಬೆಲ್ಲದ, ಸಂಗಣ್ಣ ನಾಶಿ, ಪ್ರವೀಣ ನಾಗಠಾಣ, ಶಿವಾನಂದ ಹುರಕಡ್ಲಿ, ರಮೇಶ ಕಿತ್ತೂರ, ಡಿ.ಎಸ್‌.ಚಳಗೇರಿ, ಎಸ್‌.ಎಸ್‌.ಹುನಗುಂದ, ಮುತ್ತು ಕಡಿ, ಸುದೀರ ನಾವದಗಿ, ಜಗದೀಶ ಲಕ್ಷಟ್ಟಿ, ಜಗದೀಶ ಕಂಠಿ, ರಾಜು ಜೋಳದ, ಸಂಗಮೇಶ ಕಂಠಿ, ಅಶೋಕ ಚಿನಿವಾರ, ಶಂಕರ ಕಡಿ, ಸುಚಿತ ಚಳಗೇರಿ, ಆನಂದ ತುಪ್ಪದ, ಶಾಹೀಲ್ ನಾಗಠಾಣ, ಸಮರ್ಥ ನಾವದಗಿ, ಸಂಗಮ್ಮ ಜೋಳದ, ಕವಿತಾ ಕಡಿ, ಶ್ವೇತಾ ನಾವದಗಿ, ರೇಖಾ ಗಡೇದ, ಬಸಮ್ಮ ಕೋಳೂರ, ಪಾರ್ವತಿ ಪವಾಡಶೆಟ್ಟಿ  ಗಡೇದ, ಶೋಭಾ ನಾಗಠಾಣ, ಕವಿತಾ ದಡ್ಡಿ, ಶೈಲಜಾ ಪಾವಲೆ ಸೇರಿದಂತೆ ಇತರರಿದ್ದರು.ಫೋಟೊ:28ಎಮ್‌ಡಿಬಿಎಲ್1ಎ: ಮುದ್ದೇಬಿಹಾಳ ಪಟ್ಟಣದಲ್ಲಿ ರವಿವಾರ ನಡೆದ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸಿ ಮಾತನಾಡಿದರು.