ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸಾರ್ವಜನಿಕ ಸ್ನೇಹಿ ಆಡಳಿತವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ

ಸಾರ್ವಜನಿಕರಿಗೆ ಪಾರದರ್ಶಕ ಹಾಗೂ  ಸಾರ್ವಜನಿಕ ಸ್ನೇಹಿ ಆಡಳಿತವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ Our primary duty is to provide a transparent and public-friendly administration to the public

ಹಾವೇರಿ  23: ವ್ಯಕ್ತಿಯ ಸ್ವಾರ್ಥಕ ಬದಕು ಜೀವನದ ಉದ್ದೇಶವಲ್ಲ, ಪರರ ಹಿತಕ್ಕಾಗಿ ಬದುಕುವಂತದ್ದು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಪಾಲಿಸುವುದರ ಜೊತೆಗೆ ಅನ್ಯರಿಗೆ ಪ್ರೇರಣೆಯಾಗುವಂತದ್ದು ಜೀವನದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದರು.   

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ  ಜಿಲ್ಲಾಮಟ್ಟದ ಉತ್ತಮ ಆಡಳಿತ ವಾರ ಕಾರ್ಯಾಗಾರವನ್ನು ಉದ್ಘಾಟಿಸಿ  ಮಾತನಾಡಿದ ಅವರು,ಕೇಂದ್ರ ಸರ್ಕಾರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ, ಪ್ರತಿವರ್ಷ ಡಿಸೆಂಬರ್ 19 ರಿಂದ 25 ರವರೆಗೆ ಉತ್ತಮ ಆಡಳಿತ ವಾರವನ್ನಾಗಿ ಆಚರಿಸುತ್ತದೆ.  

ಹಾಗೆಯೇ  ’ಪ್ರಶಾಸನ್ ಗಾಂವ್ ಕಿ ಓರ್ ಎಂಬ ಅಭಿಯಾನದಡಿ  ಆಡಳಿತವನ್ನು  ಹಳ್ಳಿಯ ಕಡೆಗೆ ಕರೆದುಕೊಂಡು ಹೋಗಿ  ಕೆಳಹಂತದಲ್ಲಿರುವ ಸಾರ್ವಜನಿಕರಿಗೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಸ್ನೇಹಿ ಆಡಳಿತವನ್ನು ಒದಗಿಸುವುದಾಗಿದೆ. ಹಾಗೂ  ಸಾರ್ವಜನಿಕ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವುದು, ಮತ್ತು ಡಿಜಿಟಲ್ ಆಡಳಿತ ಬಳಕೆಗೆ  ಉತ್ತೇಜನ ನೀಡುವುದಾಗಿದೆ ಎಂದರು.  

ಕಚೇರಿಗೆ ಬರುವಂತಹ  ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡದೆ ನಿಗದಿತ ಸಮಯದಲ್ಲಿ ಕೆಲಸಮಾಡಿಕೊಡಿ  ಕಚೇರಿಗೆ ಬಂದಂತಹ  ಸಾರ್ವಜನಿಕರಿಗೆ ನಿಮ್ಮ ಕಾರ್ಯವೈಖರಿ  ಅವರಲ್ಲಿ ಸಂತೋಷವನ್ನುಂಟು ಮಾಡುವಂತಿರಬೇಕು ಎಂದರು.  

ಕಾರ್ಯಕ್ರಮದಲ್ಲಿ ಜಿಲ್ಲಾವಯಸ್ಕರ  ಶಿಕ್ಷಣಧಿಕಾರಿಗಳಾದ ಡಾ. ಬಿ ಎಂ ಬೇವಿನಮರದ ರವರು ಉತ್ತಮ ಆಡಳಿತವಾರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.