ಮಹಿಳಾ ಕಾಮರ್ಿಕರ ಸ್ವಾವಲಂಬನೆ ಬದುಕು ನಿಮರ್ಾಣಕ್ಕಾಗಿ ನಮ್ಮ ಪ್ರಯತ್ನ: ನರಸಿಂಹಮೂತರ್ಿ


ಗದಗ27: ನಗರವನ್ನು ಕಟ್ಟುವಂತ ನಗರದ ಉಸಿರಾಗಿರುವ ನಗರ ವಂಚಿತ ಸಮುದಾಯಗಳ ಮಹಿಳಾ ಕಾಮರ್ಿಕರ ಸಮಸ್ಯೆಗಳ ಬಗ್ಗೆ ನಾವು ಬೆಳಕನ್ನು ಚೆಲ್ಲುವ ದೃಷ್ಟಿಯಿಂದ ಹೊರ ಜಗತ್ತಿಗೆ ಪರಿಚಯಸುವ ಸಲುವಾಗಿ ನಮ್ಮ ಸಂಘಟನೆಯಿಂದ ನಿರಂತರ ಅರಿವು ಮೂಡಿಸುವಂತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.

ಕಾಮರ್ಿಕರ ಕೊಡುಗೆ ಕುರಿತು ಅರಿವು ಮೂಡಿಸುವ ಜೊತೆಗೆ ನಗರ ವಂಚಿತ ಸಮುದಾಯದ ಮಹಿಳಾ ಕಾಮರ್ಿಕರ ಸ್ವಾತಂತ್ರ ಮತ್ತು ಸ್ವಾಲಂಬನೆಯ ಬದುಕು ಕಟ್ಟಿಕೊಳ್ಳುವಂತ ವಾತಾವರಣ ನಿಮರ್ಿಸಲು ಸಂಘಟನೆಯಿಂದ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಲಂ ಜನಾಂದೋಲನ ಕನರ್ಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂತರ್ಿ ಅವರು ಹೇಳಿದರು.

ಅವರು ಸ್ಲಂ ಜನಾಂದೋಲನ ಕನರ್ಾಟಕದಿಂದ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಹಯೋಗದಲ್ಲಿ ಹುಲಕೋಟಿಯ ಕೆ.ವಿ.ಕೆ ಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾಮರ್ಿಕರ ನಕರಾತ್ಮಕ ದೃಷ್ಟಿಕೋನ ಕುರಿತು ವಿಭಾಗ ಮಟ್ಟದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಂಚಿತ ಸಮುದಾಯಗಳಲ್ಲಿ ನಿಧರ್ಿಷ್ಟವಾದ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವಂತ ಮಹಿಳಾ ಕಾಮರ್ಿಕರನ್ನು ಸಂಘಟಿಸುವಂತ  ಕೆಲಸ ನಮ್ಮ ಸಂಘಟನೆಯಿಂದ ಮಾಡಲಾಗುತ್ತಿದೆ ಕೊಳಗೇರಿಗಳಲ್ಲಿಯ ಮಹಿಳಾ ಕಾಮರ್ಿಕರಾದ ಪೌರಕಾಮರ್ಿಕರು, ಕಟ್ಟಡ ಕಾಮರ್ಿಕರು, ಬೀದಿ ವ್ಯಾಪಾರಸ್ಥರು, ಚಿಂದಿ ಆಯುವರು, ಮನೆಗೆಲಸ ಮಾಡುವರು ಇನ್ನು ಹಲವಾರು ರೀತಿಯ ಕಾಮರ್ಿಕರಾಗಿ ಕೆಲಸ ಮಾಡುತ್ತಿರುವರ ಬಗ್ಗೆ ಸಕರ್ಾರಗಳು ಕಾಳಜಿ ವಹಿಸದೇ, ಅವರ ಬದುಕಿನ ಹಕ್ಕುಗಾಗಿ ಚಿಂತಿಸಬೇಕಾದ ನಮ್ಮ ಸಕರ್ಾರಗಳು ಅವರ ಮಾಡುತ್ತಿರುವ ಶ್ರಮಜೀವಿ ಕೆಲಸಗಳಿಗೆ ಕನಿಷ್ಟ ಕೂಲಿಯನ್ನು ಸಿಗದೇ ಕಾಮರ್ಿಕರ ಬದುಕು ಅತಂತ್ರವಾಗಿದೆ.  

ಮಹಿಳೆಯರ ರಕ್ಷಣೆಗಾಗಿ ಇರುವಂತ ಕಾನೂನುಗಳ ಕುರಿತು ಇಂತಹ ಮಾಹಿತಿ ಕಾಯರ್ಾಗಾರಳ ಮೂಲಕ ತಿಳಿದುಕೊಂಡು ನಮ್ಮ ಮಹಿಳಾ ಕಾಮರ್ಿಕರು ಯಾರು ಭಯ್ಯ ಪಡೆದೇ ತಮ್ಮ ಮೇಲೆ ಆಗುವಂತ ದೌರ್ಜನ್ಯಗಳಿಗೆ ಮತ್ತು ಶೋಷಣೆಗಳಿಗೆ ಪ್ರತಿಭಟಿಸಿ ಕಾನೂನಿನ ರಕ್ಷಣೆ ಪಡೆದುಕೊಳ್ಳಬೇಕೆಂದು ಹೇಳಿದರು. ಕಾಯರ್ಾಗಾರದಲ್ಲಿ ಉಪನ್ಯಾಸರಾಗಿ ಆಗಮಿಸಿದ್ದ ನ್ಯಾಯವಾದಿಗಳಾದ ಭಾರತಿ ಶೆಲವಡಿ ಮಾತನಾಡಿ ದುಡಿಯುವ ಪ್ರತಿಯೊಬ್ಬ ಮಹಿಳೆ ತನ್ನ ದುಡಿಮೆಗೆ ಪ್ರತಿಯಾಗಿ ಕಾನೂನು ವಿಧಿಸುವ ಕನಿಷ್ಟ ವೇತನವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ, ಕಾಮರ್ಿಕರಿಗೆ ಕನಿಷ್ಟ ವೇತನವನ್ನು ಕೊಡದೇ ಇರುವುದು ಹಾಗೂ ಕಾನೂನು ವಿಧಿಸಿರುವ ಕೆಲಸದ ಅವಧಿಕ್ಕಿಂತ ಹೆಚ್ಚು ಕೆಲಸವನ್ನು ಮಾಡಿಸಿ ಕೊಳ್ಳುವುದು ಶಿಕ್ಷಾರ್ಹವಾದ ಅಪರಾಧವಾಗುತ್ತದೆ, ಕಟ್ಟಡ ಕಾಮರ್ಿಕರು, ಬೀಡಿ ಕಟ್ಟುವ, ಕಲ್ಲು ಒಡೆಯುವ ಕೈಮಗ್ಗದ ವಸ್ತುಗಳನ್ನು ತಯಾರಿಕೆ ಮನೆಗೆಲಸ ಮಾಡುವರು ಮೊದಲಾದ ದೈಹಿಕ ಶ್ರಮದ ಕೆಲಸಗಳನ್ನು ಮಾಡುವ ಮಹಿಳಾ ಕಾಮರ್ಿಕರಿಗಾಗಿ ಅವರು ಮಾಡುವಂತ ಕೆಲಸಕ್ಕೆ ಕಾನೂನಾತ್ಮಕವಾಗಿ ಮಹಿಳಾ ರಕ್ಷಣೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

1948ರಲ್ಲಿ ನಮ್ಮ ಭಾರತ ದೇಶದಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಕಾರ ದೈಹಿಕ ಶ್ರಮಜೀವಿಗಳಾಗಿ ಕೆಲಸ ಮಾಡುತ್ತಿರುವ ಕಾಮರ್ಿಕರಿಗೆ ಜೀವನಾಗತ್ಯವಾದ ವೇತನ ಮತ್ತು ಕೆಲಸದ ವಾತಾವರಣ ನೀಡುವ ಮೂಲಕ ಉತ್ತಮ ಗುಣಮಟ್ಟದ ಜೀವನ ನಿರ್ವಹಣೆಗಾಗಿ ವೇತನವನ್ನು ನೀಡುವುದು, ಇದರಿಂದ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯಲಾಗುವುದೆಂದು ನಮ್ಮ ನ್ಯಾಯಾಲಯಗಳಲ್ಲಿ ತೀಫರ್ು ನೀಡಲಾಗಿದೆ.  ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕ ಮಹಾದೇವಿ ಮಾತನಾಡಿ ಮಹಿಳೆಯರ ಸ್ವ-ಉದ್ಯೋಗಕ್ಕಾಗಿ ಇರುವ ಸಕರ್ಾರದ ಯೋಜನೆಗಳ ಕುರಿತು ವಿವರವಾಗಿ ತಿಳಿಸಿ ಕೊಟ್ಟರು, ಗದಗ ಜಿಲ್ಲಾ ದಲಿತ ಸಂಘರ್ಸ ಸಮಿತಿ  ಸಂಚಾಲಕರಾದ ವೆಂಕಟೇಶಯ್ಯ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿದ್ದರು, ನ್ಯಾಯವಾದಿಗಳಾದ ಸಾವಿತ್ರಿ ಕಬಾಡಿ, ಸ್ಲಂ ಬೋರ್ಡ ಅಧಿಕಾರಿಗಳಾದ ಆನಂದಪ್ಪ.ಎಸ್.ಎಲ್, ಪ್ರಗತಿಪರ ಚಿಂತಕರಾದ ಬಸವರಾಜ ಪೂಜಾರ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ, ಗೌರಾವಧ್ಯಕ್ಷರಾದ ಅಶೋಕ ಮ್ಯಾಗೇರಿ, ಪೌರಕಾಮರ್ಿಕರ ಸಂಘಟನೆಯ ಪ್ರಧಾನ ಕಾರ್ಯದಶರ್ಿ ರಾಮು.ಪಿ.ಬಳ್ಳಾರಿ, ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದಶರ್ಿ ಅನ್ವರ ಶಿರಹಟ್ಟಿ, ಧಾರವಾಡ ಸ್ಲಂ ಸ್ಲಂ ಸಮಿತಿ ಸಂಚಾಲಕರಾದ ರಸೂಲ ನದಾಫ, ಹುಬ್ಬಳ್ಳಿ ಸಂಚಾಲಕಿ ಶೋಭಾ ಕಮತರ, ಬೆಳಗಾವಿ ಸಂಚಾಲಕ ಫಕ್ಕೀರಪ್ಪ ತಳವಾರ, ಗದಗ ಸ್ಲಂ ಮಹಿಳಾ ಸಮಿತಿ ಸಂಘಟನಾ ಕಾರ್ಯದಶರ್ಿ ಪರವೀಬಾನು ಹವಾಲ್ದಾರ, ಮಹಿಳಾ ಸಂಚಾಲಕಿ ಮೆಹರುನಿಸಾ ಢಾಲಾಯತ, ಸ್ಲಂ ಸಮಿತಿ ಕಾಮರ್ಿಕರ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಸ್ಲಂ ಸಮಿತಿ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ರವಿಕುಮಾರ ಬೆಳಮಕರ ವಂದಿಸಿದರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಹಾಗೂ ಗದಗ ಸ್ಲಂ ಸಮಿತಿಯ ನೂರಾರು ಮಹಿಳಾ ಕಾಮರ್ಿಕರು ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು.