ನಮ್ಮ ಶಿಕ್ಷಣ ಸಂಸ್ಥೆಗಳು ಬಡ ವಿದ್ಯಾರ್ಥಿಗಳಿಗೆ ವರದಾನವಾಗಿವೆ: ಡಾ. ಅಶೋಕ ಪಾಟೀಲ
Our educational institutions are a boon for poor students: Dr. Ashok Patil
ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಪನ್ನ;
ಕಾಗವಾಡ 21: ಸನ್ಮತಿ ಶಿಕ್ಷಣ ಸಹಕಾರ ಸಮಿತಿಯಿಂದ ನಡೆಸಲಾಗುತ್ತಿರುವ ಶಾಲಾ ಕಾಲೇಜುಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಫಲಿತಾಂಶವೂ ಸಹ ಉತ್ತಮವಾಗಿದೆಯೆಂದು ನಿರ್ದೇಶಕ ಡಾ. ಅಶೋಕ ಪಾಟೀಲ ತಿಳಿಸಿದ್ದಾರೆ.
ಅವರು, ಶನಿವಾರ ದಿ. 20 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿ ನಿಯಮಿತ ಇದರ 73 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ನಮ್ಮ ಸಹಕಾರ ಸಮಿತಿಯ ವತಿಯಿಂದ ತಾಲೂಕಿನ ಶೇಡಬಾಳ, ಉಗಾರ ಬಿಕೆ ಮತ್ತು ಬೆಳಗಾವಿಯಲ್ಲಿ ಒಟ್ಟು 11 ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಂಸ್ಥೆಗಳ ಫಲಿತಾಂಶ ಉತ್ತಮವಾಗಿದೆ. ಆಯಾ ಶಾಲಾ-ಕಾಲೇಜುಗಳು ಗವರ್ನಿಂಗ್ ಬಾಡಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬೆಳಗಾವಿ ಸಮಿತಿ ಕಾಲೇಜಿನ ಉಪನ್ಯಾಸಕ ಭರತ ಅಲಸಂದಿ, ಶೇಡಬಾಳ ಸನ್ಮತಿ ಪ್ರೌಢಶಾಲೆಯ ಮುಖ್ಯೋದ್ಯಾಪಕಿ ಎಂ.ಎನ್. ಕಾಳೇನಟ್ಟಿ, ಶೇಡಬಾಳ ಸಮಿತಿ ಕಾಲೇಜಿನ ಪ್ರಾಂಶುಪಾಲ ಬಾಹುಬಲಿ ಬಣಜವಾಡ, ಉಗಾರ ಬಿಕೆಯ ಪದ್ಮಾವತಿ ಶಾಲೆಯ ಮುಖ್ಯೋದ್ಯಾಪಕ ಎಸ್.ಪಿ. ಕಾಂಬಳೆ ಆಯಾ ಶಾಲೆಗಳ ವರದಿ ವಾಚನ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ವಹಿಸಿದ್ದರು. ಈ ವೇಳೆ ಉಪಾಧ್ಯಕ್ಷ ಅಶೋಕ ನಾಂದ್ರೆ, ಅಶ್ವತಕುಮಾರ ಪಾಟೀಲ, ಡಾ. ಅಶೋಕ ಪಾಟೀಲ, ಸನ್ಮತಿ ಪಾಟೀಲ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ಗವರ್ನಿಂಗ್ ಬಾಡಿ ಚೇರಮನ್ನ ವಿನೋದ ಪಾಟೀಲ, ಶಾಂಥಿನಾಥ ಪಾಟೀಲ, ಎ.ಬಿ. ಪಾಟೀಲ, ರವಿ ದಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕುಮಾರ ಮಾಲಗಾಂವೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 