ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕೊಡಿಸುವುದು ನಮ್ಮ ಕರ್ತವ್ಯ: ಉಮರೆ
Our duty is to respond to farmers' problems and provide solutions: Umare
ಸಂಬರಗಿ 05: ಗ್ರಾಮೀಣ ಪರದೇಶದಲ್ಲಿ ರೈತರ ಸಹಕಾರ ಹಾಗೂ ಅವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕೊಡಿಸುವುದು ನಮ್ಮ ಕರ್ತವ್ಯವೆಂದು ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಖೀಳೆಗಾವದ ಮುಖ್ಯ ಕಾರ್ಯನಿರ್ವಾಕರಾದ ಸುನೀಲ ನಿಂಗಪ್ಪ ಉಮರೆ ಹೇಳಿದರು.
ಖೀಳೆಗಾವ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಅಧಿಕಾರಿ ನಂತರ ಮಾತನಾಡಿ ಅವರು ರೈತರು ನಮ್ಮ ಬೇನೇಲ್ಬು ಇದ್ದು ಅವರು ಸಂಘದ ಕಾರ್ಯಲಯದಲ್ಲಿ ಬಂದ ನಂತರ ಅವರ ಏನೆ ಸಮಸ್ಯೆಯಿದ್ದರು ಅದಕ್ಕೆ ಸ್ಪಂದನೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಸಂಘದ ಸದಸ್ಯರಿಗೆ ನೀಡಿದ ಸಾಲವನ್ನು ನಿಗದಿತ ಅವಧಿಯಲ್ಲಿ ಮರು ಪಾವತಿಮಾಡಲು ಸಹಕರಿಸಬೇಕು ಸಂಘದ ಸಿಬ್ಬಂದಿಗಳು ಸಂಘದ ಸದಸ್ಯರಿಗೆ ಹಾಗೂ ರೈತರಿಗೆ ಒಳ್ಳೆಯ
ಸಂಭಂಧ ಇರಬೆಕೇಂದು ಹೇಳಿದರು.
ಈ ವೇಳೆ ಬ್ಯಾಂಕ ನೀರೀಕ್ಷಕರಾದ ರಮೇಸ ಗಲಗಲಿ ಮಾತನಾಡಿ ಸಂಘದ ಸಿಬ್ಬಂದಿಗಳು ಗ್ರಾಹಕರ ಜೊತೆಗೆ ಸಂಬಂಧ ಇಟ್ಟು ಅವರಿಗೆ ಒಳ್ಳೇಯ ಸಹಕಾರ ನೀಡಬೇಕು ತಮ್ಮ ಮೇಲಾಧಿಕಾರಗಳ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಹೇಳಿದರು.
ಸಂಘದ ಅಧ್ಯಕ್ಷರಾದ ಸಂಜಯ ಉಮರೆ ನಿರ್ದೇಶಕರಾದ ರಾಜು ಬಗಲಿ, ಗಣೇಶ ಹೊನ್ನಾಗೋಳ, ರಾಜು ಅರಳಿಹಟ್ಟಿ, ಕಲ್ಲಪ್ಪ ಗುರುಪಾದಗೋಳ, ಅಪ್ಪಾಸಾಬ ವಾಘಮೋಡೆ, ಬಸಪ್ಪಾ ಕೋಳಿ, ಸುಭಾಸ ಅಠೋಲೆ, ಸುಳೋಚನಾ ಗುರುವ, ಕವಿತಾ ತಗಲಿ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಗ್ರಾಮಸ್ಥರು ಉಪಸ್ಥೀರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 