ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಮೇಲೆ ಖಾಸಗಿ ಕೆಲಸಕ್ಕೆ ಕಡಿವಾಣ

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಮೇಲೆ ಖಾಸಗಿ ಕೆಲಸಕ್ಕೆ ಕಡಿವಾಣ  Curb on use of electricity poles for private work in rural areas


ಸಂಬರಗಿ 07: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿ ಮುಟ್ಟುವುದು ಹಾಗೂ ಹೆಸ್ಕಾಂ ವಿದ್ಯುತ್ ಕಂಬಗಳ ಮೇಲೆ ಖಾಸಗಿ ವ್ಯಕ್ತಿಗಳು ಕೆಲಸ ಮಾಡುವುದು ತಪ್ಪು. ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸ್ಕಾಂನ ನೂತನ ಎಂಜಿನಿಯರ್ ಚಂದ್ರಶೇಖರ ಬೋಳಗಾವಿ ಎಚ್ಚರಿಸಿದರು. ಅಥಣಿ ಹೆಸ್ಕಾಂ ವಿಭಾಗದ ಎಂಜಿನಿಯರ್ ಅಧಿಕಾರ ವಹಿಸಿಕೊಂಡ ಬಳಿಕ ಗಡಿ ಪ್ರದೇಶದ ಬಾಗಿಲು, ಶಿರೂರ ಹಾಗೂ ಜಂಬಗಿ ಉಪವಿಭಾಗದ ಕಚೇರಿಗಳಿಗೆ ಭೇಟಿ ನೀಡಿ ಸಿಬ್ಬಂದಿಗೆ ಈ ಕುರಿತು ಸೂಚನೆ ನೀಡಿದರು. ಪ್ರತಿ ಗ್ರಾಮಕ್ಕೆ ಒಬ್ಬ ವೈರ್ಮನ್ರನ್ನು ನೇಮಿಸಲಾಗಿದ್ದು, ವಿದ್ಯುತ್ ಸಮಸ್ಯೆ ಎದುರಾದರೆ ರೈತರು ಹಾಗೂ ಸಾರ್ವಜನಿಕರು ತಕ್ಷಣ ಅವರನ್ನು ಸಂಪರ್ಕಿಸಬೇಕು. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಕಂಬಗಳಿಗೆ ಪ್ರಾಣಿಗಳು ಕಟ್ಟುವುದು ಅಪಾಯಕಾರಿ. ಇದರಿಂದ ಅಪಘಾತ ಸಂಭವಿಸಿದರೆ ಹೆಸ್ಕಾಂ ಜವಾಬ್ದಾರಿಯಲ್ಲ ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ನೇಮಕಗೊಂಡ ಗ್ರಾಮಗಳಿಗೆ ಸಿಬ್ಬಂದಿ ನಿಯಮಿತವಾಗಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ತಕ್ಷಣ ಪರಿಹರಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ವೃತ್ತಾಧಿಕಾರಿ ಎಸ್‌.ಎ. ಪಾರ್ಥನಹಳ್ಳಿ ಹಾಗೂ ವೃತ್ತಾಧಿಕಾರಿ ಕೆ.ಎಸ್‌. ತಕ್ಕನ್ನವರ ಉಪಸ್ಥಿತರಿದ್ದರು.