ಇಂಡಿ ಬಂದ ಸಂಪೂರ್ಣ ಯಶಸ್ವಿ ನಮ್ಮ ಬೇಡಿಕೆ ಈಡೇರಬೇಕು: ಭಾರತಿ ವಾಲಿ

ಇಂಡಿ ಬಂದ ಸಂಪೂರ್ಣ ಯಶಸ್ವಿ ನಮ್ಮ ಬೇಡಿಕೆ ಈಡೇರಬೇಕು: ಭಾರತಿ ವಾಲಿ Our demand for a complete success of Indi should be fulfilled: Bharathi Wali


ಇಂಡಿ 12: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಡೆದ ಮುಷ್ಕರ ಯಶಸ್ವಿಯಾಗಿ ನಡೆಯಿತು.  ಇಂಡಿ  ಹಾಗೂ ಚಡಚಣ ತಾಲೂಕಿನ  ವಿವಿಧ ಸಂಘಟನೆಗಳ ಕಾರ್ಮಿಕರು ಇಂಡಿ ತಾಲೂಕಿನ ಸಿಐಟಿಯು ಅಧ್ಯಕ್ಷ ಭಾರತಿ ವಾಲಿ ಹಾಗೂ ಚಡಚಣ ತಾಲೂಕು ಸಿಐಟಿಯು ಅಧ್ಯಕ್ಷ ಅಶ್ವಿನಿ ತಳವಾರ ಅವರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಿಂದ ಸಾವಿರಾರು ಕಾರ್ಮಿಕರು ಸೇರಿ ಪ್ರತಿಭಟನೆ ಮಾಡುತ್ತ ಬಸವೇಶ್ವರ ವೃತ್ತದ ಮೂಲಕ ಮಾಹಾವೀರ ವೃತ ಅಂಬೇಡ್ಕರ್ ವೃತ್ತ ಮೂಲಕ ಮತ್ತೆ ಬಸವೇಶ್ವರ ವೃತ್ತದ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.  ಇಂಡಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಭಾರತಿ ವಾಲಿ ಅವರು ಮಾತನಾಡಿ ದುಡಿಯುವ ಕಾರ್ಮಿಕ ಹಕ್ಕು ಹಾಗೂ ಸಾರ್ವಜನಿಕ ಉದ್ಯಮಗಳನ್ನು ಉಳಿಸಲು, ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಎತ್ತಿ ಹಿಡಿಯಲು ಹೋರಾಟ ಕೈಗೊಂಡಿದ್ದೇವೆ. ನಮ್ಮ ನ್ಯಾಯಯುತ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.    

ಕರ್ನಾಟಕ ರೈತ ಪ್ರಾಂತ ಸಂಘದ ಅಧ್ಯಕ್ಷ ಭೀಮರಾಯ ಪೂಜಾರಿ ಮಾತನಾಡಿ ಕಾರ್ಮಿಕರು, ರೈತರು, ಅಂಗನವಾಡಿ ಫೆಡರೇಷನ್, ಬಿಸಿಯೂಟ ನೌಕರರ ಫೆಡರೇಷನ್ ಸೇರಿ ವಿವಿಧ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ಚಡಚಣ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಅಶ್ವಿನಿ ತಳವಾರ ಅವರು ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಘಗಳನ್ನು ನಿಯಂತ್ರಿಸಲು ಹಾಗೂ ಬಂಡವಾಳದ ದಾಳಿಯ ವಿರೋಧಿಸಿ ಕಾರ್ಮಿಕ ವರ್ಗ ಚಳವಳಿಯನ್ನು ನಿಶ್ಯಕ್ತಗೊಳಿಸಲು ಉದ್ದೇಶಿಸಿದೆ.ಮನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ ಎಂದು ಹೇಳಿದರು.

ಬಿಸಿ ಊಟ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಾಳಮ್ಮ ಬಡಿಗೇರ ಹಾಗೂ ಕೆಎಸ್ಸಾರ್ಟಿಸಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಎಸ್ ಡಿ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿ ಇಂಡಿ ತಾಲೂಕು ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗೀರಿಜಾ ಸಕ್ಕರಿ  ಚಡಚಣ ತಾಲೂಕು ಬಿಸಿ ಊಟ ನೌಕರರ ಸಂಘದ ಅಧ್ಯಕ್ಷರಾದ ಮಾಹಾನಂದ ದೊತರೇ ಹಾಗೂ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶೋಭಾ ಕಬಾಡೆ ಹಾಗೂ ಶೆಂಕ್ರೇಮ್ಮ ಪುಟಾಣಿ ಸುಜಾತಾ ಬಿರಾದಾರ ಬೌರಮ್ಮ ಪಾಟೀಲ ಶೋಭಾ ಹೋಟಗಾರ ಶಾಂತಾಬಾಯಿ ಜಾಮಗೊಂಡ ರೇಣುಕಾ ಪೂಜಾರಿ ಎಮ್ ಎಲ್ ಚೌದರಿ ಲಾಲಮ್ಮಮದ ಶೇಖ್ ಬಸವರಾಜ ಪಾಟೀಲ ಸಿದ್ದು ಪೂಜಾರಿ ಶಿವಾನಂದ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಬಂದ ಇಂದಾಗಿ ಎರಡು ಗಂಟೆಗಳ ಕಾಲ ಸಾರ್ವಜನಿಕರು ಹೈರಾಣಾಗಿ ಹೋದರು.  

ಮುಂಜಾಗ್ರಾತ ಕ್ರಮವಾಗಿ ಇಂಡಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಪ್ರದೀಪ್ ಬೀಸೆ ಅವರ ನೇತೃತ್ವದಲ್ಲಿ ವ್ಯಾಪಕ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಯಿತು. ಈ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಶಿರಸ್ತೇದಾರ ರಮೇಶ ಮೋಗಿ ಅವರು ಮನವಿ ಪತ್ರ ಸ್ವಿಕರಿಸಿದರು. 


Labor Unions Protest Central Government Labor Laws Joint Committee of Labor Unions