ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ ಸರ್ವಶ್ರೇಷ್ಠವಾದುದು
Our Constitution is the best in the world.
ಲೋಕದರ್ಶನ ವರದಿ
ಗೋಕಾಕ 16 : ಭಾರತೀಯರಲ್ಲಿ ಸಮಾನತೆಯನ್ನು ಕಂಡುಕೊಳ್ಳಲು ಅಂಬೇಡ್ಕರ್ ಅವರು ಸತತ ಪರಿಶ್ರಮಸಿ ಸಂವಿಧಾನ ನೀಡಿದ್ದಾರೆ.ಅದು ಪ್ರಪಂಚದಲ್ಲಯೇ ಸರ್ವಶ್ರೇಷ್ಠವಾದುದು. ಎಂದು ಗೋಕಾಕದ ಸಾಹಿತಿ ಹಾಗೂ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು. ಅವರು ಸಮೀಪದ ಸಿಂಧಿಕುರಬೇಟ ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ ಆರ್ ಅಂಬೇಡ್ಕರ್ ಅವರ 135ನೆಯ ಜಯಂತಿ ಉತ್ಸವದ ಸಂದರ್ಭದಲ್ಲಿ ಉಪನ್ಯಾಸ ನೀಡುತ್ತಾ ಮೇಲು ಕೀಳೀನ ವರ್ಣಭೇದಗಳನ್ನು ಹೋಗಲಾಡಿಸುವುದೇ ಅಂಬೇಡ್ಕರ್ ಅವರ ಧ್ಯೇಯವಾಗಿತ್ತು ಸತತ ಅಧ್ಯಯನ ಶೀಲತೆಯಿಂದ ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೆ ಉಡುಗೊರೆಯಾಗಿ ನೀಡಿದಂಥ ಅಮೂಲ್ಯವಾದ ಸಂವಿಧಾನವು ಸರ್ವರ ಏಳಿಗೆಯನ್ನೇ ಬಯಸುತ್ತದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾರತದ ಭವಿಷ್ಯ ಅಡಗಿದೆ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿವರ್ತನೆಯಿಂದ ಭಾರತದ ಅಭ್ಯುದಯ ಹೊಂದಲು ಸಾಧ್ಯವೆಂದು ಹೇಳಿದರು. ಮಹಾಲಿಂಗಪ್ಪ ಕೆಳಗೇರಿ, ಪರಸಪ್ಪ ಪೂಜಾರಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಗಣ್ಯಮಾನ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 