ಇಷ್ಠಲಿಂಗ ಪೂಜೆ ಮೂಲಕ ಸಮಾಜದ ಸಂಘಟನೆ

ಇಷ್ಠಲಿಂಗ ಪೂಜೆ  ಮೂಲಕ ಸಮಾಜದ ಸಂಘಟನೆ Organizing society through Ishtalinga worship

ಲೋಕದರ್ಶನ ವರದಿ 

ಸಿಂದಗಿ 02: ನಿತ್ಯ ಲಿಂಗಪೂಜೆ ಮಾಡಿಕೊಳ್ಳುವುದರಿಂದ ಆರೋಗ್ಯ ಕೊಡುತ್ತೆ, ಲಿಂಗಪೂಜೆ ದೇಹದ ಆಲಶ್ಯವನ್ನು ದೂರ ಮಾಡುತ್ತೆ ಅದಕ್ಕೆ ಲಿಂಗಾಯತ ಧರ್ಮವು ಲಿಂಗ ಪೂಜೆ ಮಾಡುವ ಮೂಲಕ ಧರ್ಮ ಕಟ್ಟೋಣ, ಸಂಘಟಿತರಾಗಿ ಮುಂದಿನ ಪೀಳಿಗೆಗೆ ಮೀಸಲಾತಿ ಸೌಲಭ್ಯ ಕೊಡಿಸೋಣ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಹೇಳಿದರು. ಸಾನಿದ್ಯ ವಹಿಸಿದ್ದ ಅವರು ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ  ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ ಮನೆಮನದಲ್ಲಿ ಇಷ್ಠಲಿಂಗಪೂಜಾ -ದೀಕ್ಷಾ ಅಭಿಯಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.