ಜಾನಪದ ವಿವಿಯ ನೇಮಕಾತಿ ರದ್ದತಿಗೆ ಸಂಘಟನೆಗಳ ಆಗ್ರಹ
Organizations demand cancellation of recruitment at Janapada University
ಶಿಗ್ಗಾವಿ 25: ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2023ರಲ್ಲಿ ಅಕ್ರಮವಾಗಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿರುವುದನ್ನು ತುರ್ತಾಗಿ ರದ್ದು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಕರ್ನಾಟಕ ಜಾನಪದ ವಿ.ವಿಯ ಹಿತರಕ್ಷಣಾ ಟ್ರಸ್ಟ್‌ನ ಪಧಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ವಿ.ವಿ.ಯ ಪ್ರಭಾರಿ ಕುಲಸಚಿವ ಡಾ. ಶಿವಶಂಕರ ಕೆ. ಅವರಿಗೆ ಮನವಿ ಸಲ್ಲಿಸಿದ ಅವರುಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2023ರ ಮೇ ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ ಅಕ್ರಮವಾಗಿ ನೇಮಕಾತಿ ನಡೆಸಿದ್ದು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದು, ಯು.ಜಿ.ಸಿ. ಎ.ಜಿ.ಸಿ. ನಿಯಮಾವಳಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ 4.2.2. ಮೂಲಕ ಮಾಡಬೇಕಾಗಿದ್ದ ಪರೀಕ್ಷೆಯನ್ನು ತಾವೇ ಮಾಡಿ ಅಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ.ಬಳಿಕ ಸರ್ಕಾರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಮೂರು ದಿನಗಳಲ್ಲಿ ವರದಿ ಕೊಡುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ವಿವರಣೆ ಕೇಳಿದೆ. ಆ ಪತ್ರವನ್ನೂ ಲೆಕ್ಕಿಸದೇ ಅಕ್ರಮ ನೇಮಕಾತಿ ಪಟ್ಟಿಗೆ ಅನುಮೋದನೆ ಪಡೆಯಲು ಸಿಂಡಿಕೇಟ್ ಸಭೆಯನ್ನು ನಡೆಸಿದ್ದಾರೆ.
ವಿಜಯಪುರದ ಅಕ್ಕಮಹಾದೇವಿ ವಿ.ವಿ.ಯಲ್ಲಿ 67 ಸಿಬ್ಬಂದಿಗಳನ್ನು ವಜಾಗೊಳಿಸಿದಂತೆ, ಬೇರೆ ಇಲಾಖೆಗಳಲ್ಲಿ ಅಕ್ರಮವಾಗಿ ನೇಮಕಾತಿಗಳನ್ನು ರದ್ದುಗೊಳಿಸಿರುವ ಉದಾಹರಣೆಗಳು ನಾಡಿನಜನತೆಯ ಕಣ್ಮುಂದೆಯೇ ಕಣ್ಮುಂದೆಯೇ ಇದ್ದು ಅದರಂತೆ ಅಕ್ರಮ ನೇಮಕಾತಿಯಲ್ಲಿ ಆಯ್ಕೆಯಾದ ಜಾನಪದ ವಿ.ವಿ.ಯ ಬೋಧಕ ಮತ್ತು ಬೋಧಕೇತರ ಅಕ್ರಮ ಅಭ್ಯರ್ಥಿಗಳನ್ನು ವಜಾಗೊಳಿಸಿ ಬೇರೇ ವಿಶ್ವ ವಿಶ್ವವಿದ್ಯಾಲಯದ ಮಾದರಿಯಂತೆ ನಿಯಮಾವಳಿಗಳನ್ನ ಪಾಲಿಸಿ ಮತ್ತೊಮ್ಮೆ ಮರು ಅಧಿಸೂಚನೆ ಹೊರಡಿಸಿ ಅರ್ಹ ಜಾನಪದ ಪದವೀಧರರನ್ನು ನೇಮಕಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ತರಾತುರಿಯಲ್ಲಿ ಸಿಂಡಿಕೇಟ್ ಸಭೆ ಮಾಡಿದ್ದು, ಆ ಸಭೆಯಲ್ಲಿ ಸಿಂಡಿಕೇಟ್ ಸದಸ್ಯರಲ್ಲದವರಿಂದ ಸಹಿ ಮಾಡಿರುವುದನ್ನು ಅನುಮಾನಗಳಿಗೆ ಕುಲಪತಿಗಳೇ ರಾಜ್ಯಪಾಲರಿಗೆ ಪತ್ರ ಬರೆದು ಒಪ್ಪಿಕೊಂಡಿದ್ದಾರೆ. ಮೌಲ್ಯಮಾಪನ ಕುಲಸಚಿವರನ್ನು ಆಯ್ಕೆಯ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು ಕಾರಣವಾಗಿದೆ, ಈ ಅಕ್ರಮ ನೇಮಕಾತಿಯಲ್ಲಿರುವ ಸಿಬ್ಬಂದಿಗಳಿಗೆ ಕ್ರಮ ಜರುಗಿಸದೇ ಹೀಗೆ ಮುಂದುವರೆಸಿದರೆ ಜಾನಪದವಿಶ್ವವಿದ್ಯಾನಿಲಯದ ಕಛೇರಿಯ ಮುಂದೆ ಪ್ರತಿಭಟನೆಯ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ' ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.ಧಾರವಾಡ ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಶಿವಸೋಮಣ್ಣ ನಿಟ್ಟೂರ, ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ದುಗ್ಗಾಣಿ, ಉಪಾಧ್ಯಕ್ಷ ಡಾ. ನಾಗರಾಜ ಎಸ್.. ಎಚ್.ಕೆ. ಕನ್ನಮ್ಮವರ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಬಣಕಾರ, ಗುಡ್ಡಪ್ಪ ಮಾಳಗಿ, ಗುಡ್ಡಪ್ಪ ಹರಿಜನ, ಫಕ್ಕೀರೇಶ ಮಾದರ, ಕರ್ನಾಟಕ ಜಾನಪದ ವಿ.ವಿ.ಯ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 