ಸಂಘಟನೆ ಕೇವಲ ಸ್ವಾರ್ಥಕ್ಕಾಗಿ ಆಗಬಾರದು: ಮಾಳೋದೆ
Organization should not be just for selfish reasons: Malode
ಲೋಕದರ್ಶನ ವರದಿ
ಜಮಖಂಡಿ 18: ಸಂಘಟನೆ ಮಾಡುವುದು ಕೇವಲ ಸ್ವಾರ್ಥಕ್ಕಾಗಿ ಆಗಬಾರದು. ಸಂಘಟನೆಯಲ್ಲಿ ಇರುವರನ್ನು ಬೆಳಸುವ ಕಾರ್ಯ ಮಾಡುವುದೆ ಸಂಘಟನೆಯಾಗಬೇಕು ಎಂದು ಬಾಗಲಕೋಟ ಜಿಲ್ಲಾ ಅಂಚೆ ಅಧೀಕ್ಷಕ ಮೋಹನ ಮಾಳೋದೆ ಹೇಳಿದರು.
ನಗರದ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಜರುಗಿದ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಎರಡನೇ ದ್ವೈ ವಾರ್ಷಿಕ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯಲ್ಲಿ ಯಾವುದೇ ಸಮಸ್ಯೆಗಳು ಬಂದರು ಸಹ ಅದನ್ನು ಪರಿಹರಿಸುವ ಕೆಲಸ ಮಾಡುವ ಮನೋಭಾವ ಜೀವನದಲ್ಲಿ ಸಂಗಟನೆಯಲ್ಲಿ ಇರುವ ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಘಟನೆಯನ್ನು ಉಳಿಸಿ ಬೆಳಸುವ ಕೆಲಸ ಎಲ್ಲ ಸದಸ್ಯರುಗಳು ಮಾಡಬೇಕು ಎಂದು ಸಲಹೆಯನ್ನು ನೀಡಿದರು.
ಸಿ.ಜಿ.ಕಾಂಬಳೆ ಪ್ರಾಸ್ತಾವಿಕ ಮಾತನಾಡಿದ ಆವರು, ಸಂಘ ನಮ್ಮಗಾಗಿ ಸಂಘಕ್ಕೆ ನಾವಲ್ಲ. ಸಂಘಟನೆಯಲ್ಲಿ 5 ಜನರು ಇದ್ದರು ಸಂಘ. 50 ಜನರು ಇದ್ದರು ಸಂಘ. ಇದೊಂದು ಸಂಘಟನೆಯನ್ನು ಬೆಳೆಸುವ ಕಾರ್ಯವನ್ನು ನಾವುಗಳು ಮಾಡಬೇಕು. ಸಂಘಟನೆಯ ಮಹತ್ವ. ಸದಸ್ಯತ್ವದ ಮಹತ್ವದ ಕುರಿತು ತಿಳಿದುಕೊಳ್ಳಬೇಕು. ಸಂಘಕ್ಕೆ ಎಲ್ಲರೂ ಶರಣಾಗಬೇಕು. ಪ್ರಾಣಿಗಳಿಗೆ ಸಂಘಟನೆ ಬೇಕಾಗಿಲ್ಲ. ಆದರೆ ಸಮಾಜದಲ್ಲಿ ಬದುಕುವ ಜನರಿಗೆ ಸಂಘಟನೆ ಬಹಳ ಮುಖ್ಯವಾಗಿದೆ. ನಿಸ್ವಾರ್ಥ ಸೇವೆ ಸಲಿಸುವ ಕೆಲಸ ಇರಬೇಕು ಹಾಗೂ ನಿಸ್ವಾರ್ಥ ಮನೋಭಾವ ನಮ್ಮಲ್ಲಿ ಇರಬೇಕು. ಎಸ್‌ಸಿ, ಎಸ್‌ಟಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಸಂಘಟನೆ ಮಾಡಬೇಕು ಎಂದರು.
ಆರ್, ನವೀನಕುಮಾರ ವಲಯ ಕಾರ್ಯದರ್ಶಿ, ಕರ್ನಾಟಕ ವಲಯ ಅಧ್ಯಕ್ಷ ಕುಪೇಂದ್ರ ವಟಾರೆ, ಅಂಚೆ ಅಧೀಕ್ಷ ಬೀದರ ವಿಭಾಗ ವಿ,ಎಲ್, ಚಿತ್ತಕೋಟೆ ಮಾತನಾಡಿದರು. ಪ.ಜಾತಿ, ಪ,ಪಂಗಡ ಅಧ್ಯಕ್ಷ ಷಣ್ಮುಖ ನೀಲನಾಯಕ, ಎಸ್,ಎನ್, ಪ್ರಸನ್ನ, ರವೀಂದ್ರ ನಾಯಕ, ಆರ್,ಡಿ, ಕೋಷ್ಠಿ, ದೀಪಕ ಸಾಳುಂಕಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಶ್ವೇತಾ ಗುಳೇದಗುಡ್ಡ, ಪವಿತ್ರಾ ಬಾಗಲಕೋಟ, ನೇಹಾ ಹುಳನ್ನವರ ನಿರೂಪಿಸಿ. ಸ್ವಾಗತಿಸಿದರು. ಸವಿತಾ ಸುತಗಟ್ಟಿ, ಮಮತಾ ದಾನವಾಡಕರ ವಂದಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 