ಪಹಲ್ಗಾಮ್ ದಾಳಿಯ ನಂತರ ಮುಚ್ಚಲ್ಪಟ್ಟ 14 ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ಜಮ್ಮು-ಕಾಶ್ಮೀರಕ್ಕೆ ಆದೇಶ
Order to Jammu and Kashmir to reopen 14 tourist spots closed after Pahalgam attack
ಶ್ರೀನಗರ: ಕಳೆದ ವರ್ಷ ಏಪ್ರಿಲನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮುಚ್ಚಲ್ಪಟ್ಟಿದ್ದ ಕೇಂದ್ರಾಡಳಿತ ಪ್ರದೇಶದ 14 ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೋಮವಾರ ಆದೇಶಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು, ಅದರಲ್ಲಿ ಹೆಚ್ಚಿನವರು ಪ್ರವಾಸಿಗರು.
“ಸಂಪೂರ್ಣ ಭದ್ರತಾ ಪರೀಶೀಲನೆ ಮತ್ತು ಚರ್ಚೆಗಳ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿ ಹೆಚ್ಚಿನ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ನಾನು ಆದೇಶಿಸಿದ್ದೇನೆ” ಎಂದು ಎಲ್-ಜಿ ಕಚೇರಿ ಘಿ ನಲ್ಲಿ ತಿಳಿಸಿದೆ.
ಇದರೊಂದಿಗೆ, ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ನಂತರ ಮತ್ತೆ ತೆರೆಯಲಾದ ಒಟ್ಟು ಪ್ರವಾಸಿ ತಾಣಗಳ ಸಂಖ್ಯೆ 26ಕ್ಕೆ ಏರಿತು.
ಸೆಪ್ಟೆಂಬರ್ 26 ರಂದು, ಎಲ್-ಜಿ 12 ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ಆದೇಶಿಸಿತ್ತು.
“ಕಾಶ್ಮೀರ ವಿಭಾಗದ ಹನ್ನೊಂದು ಪ್ರವಾಸಿ ತಾಣಗಳಾದ - ಯೂಸ್ಮಾರ್ಗ, ದೂಧ್ಪತ್ರಿ, ಕೊಕರ್ನಾಗನ ದಂಡಿಪೋರಾ ಪಾರ್ಕ, ಶೋಪಿಯಾನ್ನ ಪೀರ್ ಕಿ ಗಲಿ, ದುಬ್ಜನ್ ಮತ್ತು ಪದ್ಪವಾನ್, ಅಸ್ತಾನ್ಪೋರಾ, ಶ್ರೀನಗರದ ಟುಲಿಪ್ ಗಾರ್ಡನ್, ತಜ್ವಾಸ್ ಗ್ಲೇಸಿಯರ್, ಗಂಡರ್ಬಾಲನ ಹಂಗ್ ಪಾರ್ಕ್ ಮತ್ತು ಬಾರಾಮುಲ್ಲಾದ ವುಲ್ಲಾರ್ ಮತ್ತು ವಾಟ್ಲಾಬ್” ಗಳನ್ನು ತಕ್ಷಣವೇ ಪುನಃ ತೆರೆಯಲಾಗುವುದು” ಎಂದು ಸಿನ್ಹಾ ಹೇಳಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 