ಮಾಸ್ಕೋ, ಜ9, ತನ್ನ ಆರ್ಥಿಕತೆಯೊಂದಿಗೆ ಹೆಚ್ಚಿನ ಖಾಸಗಿ ಸಂಸ್ಥೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚೀನಾ, ಮೊದಲ ಬಾರಿಗೆ ದೇಶದಲ್ಲಿ ತೈಲ ಮತ್ತು ಅನಿಲ ಉತ್ಪಾದನೆ ಮತ್ತು ಅನ್ವೇಷಣೆಗೆ ವಿದೇಶಿ ಕಂಪನಿಗಳನ್ನು ಮುಕ್ತವಾಗಿಸಲು ಉದ್ದೇಶಿಸಿದೆ ಎಂದು ಗುರುವಾರ ಅಲ್ಲಿನ ನೈಸರ್ಗಿಕ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ದೇಶೀಯ ಮತ್ತು ವಿದೇಶಿ ಕಂಪೆನಿಗಳನ್ನು ಮುಕ್ತವಾಗಿಸುವುದು ಸುಧಾರಣಾ ಕ್ರಮವಾಗಿದೆ.’ ಎಂದು ಚೀನಾ ನೈಸರ್ಗಿಕ ಸಂಪನ್ಮೂಲ ಉಪ ಸಚಿವ ಲಿಂಗ್ ಯುಮಿಂಗ್.’ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚೀನಾದಲ್ಲಿ ನೋಂದಾಯಿತವಾಗಿರುವ 43 ದಶಲಕ್ಷ ಡಾಲರ್ ಆಸ್ತಿಯನ್ನು ಹೊಂದಿರುವ ವಿದೇಶಿ ಕಂಪೆನಿಗಳು ತೈಲ ಮತ್ತು ಅನಿಲ ಗಣಿಗಾರಿಕೆಯ ಹಕ್ಕುಗಳನ್ನು ಪಡೆಯಲಿವೆ ಎಂದು ಉಪಸಚಿವರು ಹೇಳಿದ್ದಾರೆ. ಮೇ ಒಂದರಿಂದ ಇದು ಜಾರಿಗೆ ಬರಲಿದ್ದು, ಖನಿಜ ಸಂಪನ್ಮೂಲ ಗಣಿಗಾರಿಕೆಯ ಪರವಾನಿಗೆ ಅವಧಿ ಐದು ವರ್ಷಗಳಾಗಿರುತ್ತದೆ. ಈ ಹಿಂದೆ, ವಿದೇಶಿ ಕಂಪೆನಿಗಳು ತೈಲ ಮತ್ತು ಅನಿಲ ಉದ್ಯಮ ಪ್ರವೇಶಿಸಬೇಕಾದರೆ, ಚೀನಾ ಕಂಪೆನಿಗಳೊಂದಿಗೆ ಅದರಲ್ಲೂ ಚೀನಾ ರಾಷ್ಟ್ರೀಯ ಪೆಟ್ರೋಲಿಯಂ ಕಂಪೆನಿ ಮತ್ತು ಚೀನಾ ಪೆಟ್ರೋ ಕೆಮಿಕಲ್ ನಿಗಮದೊಂದಿಗೆ ಸಹಕಾರ ಒಪ್ಪಂದ ಮಾಡಿಕೊಳ್ಳಬೇಕಿತ್ತು.