ಋತುಸ್ರಾವದ ಕುರಿತು ಮುಕ್ತ ಚರ್ಚೆ ಅಗತ್ಯ: ಡಾ. ಕಾವ್ಯ ಪಟ್ಟಣಶೆಟ್ಟಿ
Open discussion on menstruation is essential: Dr. Kavya Pattanashetti
ಕೊಪ್ಪಳ, ಆ. ೨೪: ಋತುಸ್ರಾವವನ್ನು ನಿಷಿದ್ಧ ವಿಷಯವೆಂದು ಪರಿಗಣಿಸದೆ, ಮಹಿಳೆಯರ ಆರೋಗ್ಯ ಮತ್ತು ಕ್ಷೇಮದ ಸಹಜ ಹಾಗೂ ಮಹತ್ವದ ಭಾಗವೆಂದು ಸ್ವೀಕರಿಸುವ ಅಗತ್ಯವಿದೆ ಎಂದು ಕೊಪ್ಪಳದ ಪ್ರತಿಷ್ಠಿತ ಯುವ ವೈದ್ಯೆ ಡಾ. ಕಾವ್ಯ ಪಟ್ಟಣಶೆಟ್ಟಿ ಹೇಳಿದರು.
ಕೊಪ್ಪಳ ಇನ್ನರ್ ವೀಲ್ ಕ್ಲಬ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನೇಹ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯ, ಸಮಗ್ರ ಆರೋಗ್ಯ ಮತ್ತು ಕ್ಷೇಮದ ಕುರಿತು ಅರಿವು ಮೂಡಿಸುವುದು ಹಾಗೂ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಋತುಚಕ್ರದ ವಿವಿಧ ಹಂತಗಳು ಹಾಗೂ ಅವುಗಳೊಂದಿಗೆ ಚಂದ್ರನ ನೈಸರ್ಗಿಕ ಚಕ್ರಕ್ಕಿರುವ ಸಂಬAಧದ ಕುರಿತು ವಿವರಿಸಿದ ಅವರು, ಋತುಚಕ್ರದ ಅವಧಿಯಲ್ಲಿ ಮಹಿಳೆಯರಲ್ಲಿ ಉಂಟಾಗುವ ದೈಹಿಕ, ಭಾವನಾತ್ಮಕ ಹಾಗೂ ಶಕ್ತಿಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದು ಮುಖ್ಯ ಎಂದು ತಿಳಿಸಿದರು.
ಮಹಿಳೆಯರು ತಮ್ಮ ದೇಹದ ಸಹಜ ಲಯವನ್ನು ವಿರೋಧಿಸುವ ಬದಲು ದೇಹದ ಮಾತನ್ನು ಆಲಿಸಿ, ಅದನ್ನು ಗೌರವಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ. ಋತುಸ್ರಾವದ ಕುರಿತು ಮುಕ್ತವಾಗಿ ಮಾತನಾಡುವುದು, ಮಹಿಳೆಯರಲ್ಲಿ ಅರಿವು ಮೂಡಿಸುವುದು ಹಾಗೂ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲ ನೀಡುವ ವಾತಾವರಣ ನಿರ್ಮಿಸುವಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂದು ಡಾ. ಕಾವ್ಯ ಪಟ್ಟಣಶೆಟ್ಟಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದ ಭಾವಿ ವಹಿಸಿದ್ದರು. ಅವರು ಮಾತನಾಡಿ, ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಉಪಯುಕ್ತ ಸಲಹೆ, ಸೂಚನೆ ಮತ್ತು ಮಾಹಿತಿಯನ್ನು ನೀಡುವ ಮೂಲಕ ಅರಿವು ಮೂಡಿಸಿದ ಡಾ. ಕಾವ್ಯ ಪಟ್ಟಣಶೆಟ್ಟಿ ಅವರನ್ನು ಕ್ಲಬ್ ಪರವಾಗಿ ಅಭಿನಂದಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕ್ಲಬ್ನ ಐಎಸ್‌ಒ ಲತಾ ಪಟ್ಟಣಶೆಟ್ಟಿ, ಹಿರಿಯ ಸದಸ್ಯರಾದ ಡಾ. ರಾಧಾ ಕುಲಕರ್ಣಿ ಸೇರಿದಂತೆ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 