ನಿರಂತರ ಪರಿಶ್ರಮದಿಂದ ಮಾತ್ರ ಎತ್ತರ ಮಟ್ಟಕ್ಕೆ ಬೆಳೆಯಲು ಸಾದ್ಯ : ಬಿಇಓ ಅಂಬಿಗೇರ
Only through continuous effort can one reach greater heights: BEO Ambigera
ಶಿಗ್ಗಾವಿ 03 : ನಿರಂತರ ಪರಿಶ್ರಮದಿಂದ ಮಾತ್ರ ಎತ್ತರ ಮಟ್ಟಕ್ಕೆ ಬೆಳೆಯಲು ಸಾದ್ಯವಿದೆ, ದಾನ ಮಾಡುವ ಮನಸ್ಸಿರುವವನಿಗೆ ಬಡತನವೇ ಬರುವುದಿಲ್ಲ, ನಾವು ಬಿತ್ತುವ ಸಂಸ್ಕಾರಯುತ ಕಾರ್ಯಕ್ರಮಗಳು ಮಕ್ಕಳಿಗೆ ಪ್ರಭಾವ ಬೀರಲು ಸಾದ್ಯವಿದೆಬಿಇಓ ಎಂ ಬಿ ಅಂಬಿಗೇರ ಹೇಳಿದರು. ಪಟ್ಡಣದ ವಿರಕ್ತಮಠದಲ್ಲಿ ಭಾರತ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ 2026 ರ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕಾರಯುತ ಬೇಸಿಗೆ ಶಿಬಿರ ಇದಾಗಿತ್ತು, ಹೀಗಾಗಿ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು, ಬೇಸಿಗೆ ಶಿಬಿರವು ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸಾಮರ್ಥ್ಯವನ್ನ ಹೆಚ್ಚಿಸುವ ಕಾರ್ಯವನ್ನೂ ಈ ಉಚಿತ ಬೇಸಿಗೆ ಶಿಬಿರದಲ್ಲಿ ಆಗಿದೆ ಎಂದ ಅವರು, ಹಣೆ ಬರಹವನ್ನ ಯಾರೂ ನಂಬಬೇಡಿ, ಮೂಢ ನಂಬಿಕೆ ಮನುಷ್ಯನನ್ನ ಅಜ್ಞಾನಕ್ಕೆ ದೂಡುತ್ತದೆ,
ಹಣೆ ಬರಹ ಇದ್ದಂತೆ ಆಗುತ್ತಿ ಎಂದು ಮಕ್ಕಳಿಗೆ ಹೇಳುವುದಕ್ಕಿಂತ ಪಾಲಕರು ಮಕ್ಕಳಿಗೆ ನೀನು ಅಂದುಕೊಂಡಂತೆ ಆಗುತ್ತಿ ಎಂದು ಪ್ರೇರೇಪಿಸಿ ಎಂದು ಕಿವಿ ಮಾತು ಹೇಳಿದರು. ಭಾರತ ಸೇವಾ ಸಂಸ್ಥೆ ಅದ್ಯಕ್ಷ ಹಾಗೂ ಬೇಸಿಗೆ ಶಿಬಿರದ ಪ್ರಾಯೋಜಕರಾದ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ನಾವು ಹಮ್ಮಿಕೊಂಡಿರುವ ಉಚಿತ ಬೇಸಿಗೆ ಶಿಬಿರದಲ್ಲಿ ದೈಹಿಕ ಶಿಕ್ಷಕರು ಹಾಗೂ ಹಲವಾರು ನುರಿತ ಶಿಕ್ಷಕರ ಶ್ರಮ ಬಹಳಷ್ಟಿದೆ ಜೊತೆಗೆ ಪಾಲಕರ ಹಾಗೂ ಮಕ್ಕಳ ಭಾಗವಹಿಸುವಿಕೆಯೂ ಮುಖ್ಯ ಕಾರಣವಾಗಿದೆ, ಸದೃಢ ದೇಹ ಸದೃಢ ಮನಸ್ಸು ಹುಟ್ಟಿ ಹಾಕಲು ಸಾದ್ಯವಿದೆ, ಶಿಬಿರದಲ್ಲಿ ವಿಶೇಷವಾಗಿ ಮಲ್ಲಕಂಬ ಆಟವನ್ನ ಆಡಿಸಲಾಯಿತು, ಮಕ್ಕಳ ಬೆಳೆಸುವ ಪ್ರಯತ್ನದಲ್ಲಿ ಎಲ್ಲರೂ ಕೈ ಜೋಡಿಸಬೇಕು, ಗುರಿ ಇಟ್ಟು ಪ್ರಯತ್ನವೇ ಇಲ್ಲದೇ ಬೆಳವಣಿಗೆ ಸಾದ್ಯವಿಲ್ಲ, ಸತತ ಪ್ರಯತ್ನ ಬೇಕು, ನಮ್ಮ ತಾಲೂಕಾ ವಿಶೇಷ ಪಾವಿತ್ರ್ಯತೆಯನ್ನ ಹೊಂದಿದ ಭೂಮಿಯಾಗಿದೆ,
ವಿವಿಧ ಕ್ಷೇತ್ರದಲ್ಲಿ ಸಾಧನೆ ಮತ್ತು ಕೊಡುಗೆಯನ್ನ ನೀಡಿದ ಕ್ಷೇತ್ರವಾಗಿದೆ ಎಂದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ದಿವ್ಯ ಸಾನಿದ್ಯವಹಿಸಿದ್ದರು. ಸವಣೂರ ತಹಶೀಲ್ದಾರ ರವಿ ಕೊರವರ, ಮುಖಂಡ ರಮೇಶ ಸಾತಣ್ಣವರ, ತಾಲೂಕಾ ನೌಕರರ ಸಂಘದ ಅದ್ಯಕ್ಷ ಅರುಣ ಹುಡೇದಗೌಡ್ರ, ನಿಸ್ಸಾರ ಅಹ್ಮದ್ ಮಾತನಾಡಿದರು.ನಂತರ ನಡೆದ ಶಿಭಿರಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.ದೈಹಿಕ ಶಿಕ್ಷಕರಾದ ಬಸವರಾಜ ಹೋಸಪೇಟಿ, ಭರತ ಕಳ್ಳಿಮನಿ, ಪ್ರೋ ಶಸಿಕಾಂತ ರಾಠೋಡ, ಬಸಲಿಂಗಪ್ಪ ನರಗುಂದ, ರವಿ ಮಡಿವಾಳರ, ಚೇತನ ಕಲಾಲ, ಸಾಧಿಕ ಸವಣೂರ, ದರ್ಶನ ಕರೂರ, ಶಂಕರ ಧಾರವಾಡ, ಸಂತೋಷ ಧಾರವಾಡ ಸೇರಿದಂತೆ ಈಶ್ವರ ಹರಕುಣಿ ಸೇರಿದಂತೆ ಶಿಭಿರಾರ್ಥಿಗಳ ಪಾಲಕರು, ಶಿಭಿರಾರ್ಥಿಗಳು ಇದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 