ಈರುಳ್ಳಿ ದರ ಕುಸಿತ: ಕಂಗಾಲಾದ ರೈತನಿಗೆ ಪರಿಹಾರ ನೀಡಲು ಆಗ್ರಹ
Onion price drop: Demand for compensation for distressed farmers
ಬೀಳಗಿ 11: ಉತ್ತರ ಕರ್ನಾಟಕದಲ್ಲಿ ವಾಣಿಜ್ಯ ಬೆಳೆಯಾದ ಈರುಳ್ಳಿ ಬೆಳೆ ಫಸಲು ಚನ್ನಾಗಿ ಬಂದಿದ್ದು, ಈ ಬೆಳೆಯನ್ನು ಬೆಳೆಯಲು ಪ್ರತಿ ಎಕರೆಗೆ ಕನಿಷ್ಟ 50 ರಿಂದ 60 ಸಾವಿರದವರಗೆ ಸಾಲಸೂಲ ಮಾಡಿ ಖರ್ಚು ಮಾಡಲಾಗಿದೆ. ಅದರೆ ಮಾರ್ಕೆಟನಲ್ಲಿ ಅದರ ದರ ಕುಸಿತದಿಂದಾಗಿ ರೈತರು ಪರಸ್ಥಿತಿ ಚಿಂತಾಜನಕವಾಗಿದ್ದು ಸರಕಾರ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಒತ್ತಾಯಿಸಿದ್ದಾರೆ
ಅತಿವೃಷ್ಟಿಯಿಂದ ರೈತರ ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ನೀರು ಪಾಲಾಗಿ ಆಪಾರ ಪ್ರಮಾಣದಲ್ಲಿ ಹಾನಿಯಾದರೂ ಕೃಷಿ , ತೋಟಗಾರಿಗಾರಿಕೆ, ಕಂದಾಯ ಇಲಾಖೆ ಕೆಲವು ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಸರಿಯಾಗಿ ಪರಿಹಾರ ವಿತರಣೆಯಾಗಲಿಲ್ಲ, ಫಸಲ್ ಭೀಮಾ ಯೋಜನೆಡಿಯಲ್ಲಿ ಬೆಳೆ ವಿಮಾ ಪ್ರೀಮಿಯಂ ಪಾವತಿಸಿದರೂ ಅದರಿಂದ ರೈತರಿಗೆ ಸರಿಯಾಗಿ ಕ್ಲೇಮ್ ದೊರಕಲಿಲ್ಲ, ವಿಮಾ ಅಧಿಕಾರಿಗಳು ನಿಜವಾದ ಫಲಾನುಭವಿಗಳಿಗೆ ಹಂಚದೇ ಫಲಾನುಭವಿಗಳಲ್ಲದವರಿಗೆ ನೀಡಿ ಭ್ರಷ್ಟಾಚಾರವೆಸಗಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಸರಕಾರ ತಕ್ಷಣ ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು ಬಿತ್ತನೆಗೆ ರಸಗೊಬ್ಬರ,ಓಷದಿ ಕೂಲಿ ಕಾರ್ಮಿಕರ ವೇತನಕ್ಕೆ ಸಾಲ ಸೂಲ ಮಾಡಿದ್ದು ಅದನ್ನು ತಿರಿಸಲಾಗದೇ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸಿ ಆತ್ಮಹತ್ಯೆಯಂತ ಘಟನೆಗಳು ಜರುಗಬಹುದಾಗಿದ್ದು ಅವುಗಳನ್ನು ತಪ್ಪಿಸಲು ಈರುಳ್ಳಿ ಬೆಳೆಗಾರರಿಗೆ ಸರಕಾರ ಕೂಡಲೇ ಹಾನಿಯಾದ ರೈತರಿಗೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ರೈತರ ಜೊತೆಗೂಡಿ ಭಾರತೀಯ ಕಿಸಾನ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರೇಮಠ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 