ಹೆದ್ದಾರಿ 66 ರಲ್ಲಿ ಶಿರೂರು ಲ್ಯಾಂಡ್ ಸ್ಲೈಡ್ ದುರಂತಕ್ಕೆ ಒಂದು ವರ್ಷ ಕೇರಳ ಶಾಸಕರಿಂದ ಕೃತಿ ರಚನೆ ಎರಡು ತಿಂಗಳಲ್ಲಿ ಪೂರ್ಣ* ಮುದ್ರಣಕ್ಕೆ ನಡೆದಿದೆ ಸಿದ್ಧತೆ
One year after the Shirur landslide disaster on Highway 66, Kerala MLA's book written and ready for
ಹೆದ್ದಾರಿ 66 ರಲ್ಲಿ ಶಿರೂರು ಲ್ಯಾಂಡ್ ಸ್ಲೈಡ್ ದುರಂತಕ್ಕೆ ಒಂದು ವರ್ಷ ಕೇರಳ ಶಾಸಕರಿಂದ ಕೃತಿ ರಚನೆ ಎರಡು ತಿಂಗಳಲ್ಲಿ ಪೂರ್ಣ* ಮುದ್ರಣಕ್ಕೆ ನಡೆದಿದೆ ಸಿದ್ಧತೆ
ಕಾರವಾರ 29 : ಕೇರಳದ ಲಾರಿ ಚಾಲಕ ಅರ್ಜುನ್ ಬಗ್ಗೆ ಪುಸ್ತಕ ಬರೆಯುತ್ತಿರುವೆ ಎಂದು ಕೇರಳ ರಾಜ್ಯದ ಮಂಜೇಶ್ವರ ಶಾಸಕ ಆಶ್ರಫ್ ಹೇಳಿದರು.ಕಾರವಾರದ ಶಾಸಕ ಸೈಲ್ ರನ್ನು ಭೇಟಿ ಮಾಡಲು ಬಂದಿದ್ದ ಅವರು ಕಾರ್ಮಿಕ ಸಚಿವ ಸಂತೋಷ ಲಾಡ್ ರನ್ನು ಸಹ ಭೇಟಿ ಮಾಡಿದರು.ಕಾರ್ಮಿಕ ಇಲಾಖೆಯ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗಿಯಾದ ಆಶ್ರಫ್ , ಕೊನೆಯಲ್ಲಿ ಮಾಧ್ಯಮಗಳ ಜೊತೆ ತಾವು ಬರೆಯುತ್ತಿರುವ ಹೊಸ ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡರು.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ವರ್ಷ ಶಿರೂರು ಬಳಿ ಲ್ಯಾಂಡ್ ಸ್ಲೈಡ್ ಧರೆ ಕುಸಿತದ ಘಟನೆಯಾಗಿ ಒಂದು ವರ್ಷವಾಯಿತು. ಈ ಕಹಿ ಘಟನೆಯಲ್ಲಿ ಕೇರಳದ ಕೊಟ್ಟಾಯಂ ನಾಗರಿಕ ಲಾರಿ ಡ್ರೈವರ್ ಅರ್ಜುನ ಮೃತಪಟ್ಟಿದ್ದ. ಆತನ ಶವಕಕ್ಕಾಗಿ ,72 ದಿನ ಹುಡುಕಾಡಿದ ನಂತರ ಕೊನೆಯ ದಿನ ಯಶಸ್ಸು ಸಿಕ್ಕಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರ ,ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಟಿಗಟ್ಟಲೇ ಹಣ ವ್ಯಯಿಸಿದ್ದರು. ಈ ಕಾರ್ಯಕ್ಕೆ ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಲು ಬಂದಿರುವೆ ಎಂದು ಕನ್ನಡ ಮಾತನಾಡುವ ಮಂಜೇಶ್ವರ ಶಾಸಕ ಆಶ್ರಫ್ ಹೇಳಿದರು.ಅಲ್ಲದೆ ಶಿರೂರು ಈ ಕಾರ್ಯಾಚರಣೆ ಹಾಗೂ ಅರ್ಜುನ್ ಜೀವನ ಕುರಿತು ಪುಸ್ತಕ ಬರೆಯುತ್ತಿರುವೆ. ಅದು ಅಂತಿಮ ಹಂತದಲ್ಲಿದೆ. ಅದನ್ನು ಕೇರಳ ಮತ್ತು ಕರ್ನಾಟಕ ಸಿಎಂ ಅವರ ಕಡೆಯಿಂದ ಬಿಡುಗಡೆ ಮಾಡಿಸುವ ಉದ್ದೇಶವಿದೆ ಎಂದರು .ಅಲ್ಲದೆ ಅರ್ಜುನ್ ಕೇರಳದ ಮನೆಮಗ. ಆತನಿಗಾಗಿ ಹುಡುಕಾಟ ಗಂಗಾವಳಿ ನದಿಯಲ್ಲಿ ನಡೆಯುತ್ತಿದ್ದಾಗ , ಕೇರಳದ ಮಸೀದಿ, ಚರ್ಚ, ದೇವಾಲಯಗಳಲ್ಲಿ ಪ್ರಾರ್ಥನೆ , ಫೂಜೆ ನಡೆಯುತ್ತಿತ್ತು ಎಂದು ನೆನಪಿಸಿದರು.ಕೇರಳ ಸರ್ವಧರ್ಮ ಸಮನ್ವಯದ ನಾಡು. ಅಲ್ಲಿ ಭಿನ್ನತೆ ಇಲ್ಲ. ಅರ್ಜುನಗಾಗಿ ಹುಡುಕಾಟ ನಡೆದಾಗ ಇದ್ದದ್ದು ಧರ್ಮವಲ್ಲ. ಅಲ್ಲಿ ಇದ್ದುದು ಮಾನವೀಯತೆ ಹಾಗೂ ಮನುಷ್ಯತ್ವ.ಕೇರಳದಲ್ಲಿ ಮಾನವೀಯತೆಗೆ , ಮನುಷ್ಯರಿಗೆ ಸಹಾಯ ಮಾಡುವಲ್ಲಿ ಮೊದಲ ಸ್ಥಾನ. ನಾನು ಅರ್ಜುನ್ ಕುಟುಂಬವನ್ನು ಹತ್ತಿರದಿಂದ ನೋಡಿದ್ದೇನೆ. ಆತ ಕಾಣಡಯಾದಾಗ,ದುರಂತ ಖಚಿತವಾದಾಗ ಕೇರಳ ತಳಮಳ ಗೊಂಡಿತ್ತು. ಅನುಕಂಪ ತೋರಿತ್ತು. ಕರ್ನಾಟಕ ಸರ್ಕಾರದ ನೆರವು ನಾವು ಮರೆಯಲ್ಲ ಎಂದು ಆಶ್ರಫ್ ನುಡಿದರು.ಮಾಧ್ಯಮಗಳ ಸಹಕಾರ ಸಹ ದೊಡ್ಡದಿದೆ. ಅದೆಲ್ಲಾ ವಿವರ ನನ್ನ ಪುಸ್ತಕದಲ್ಲಿದೆ . ಕೇರಳದ ನಿರ್ದೇಶಕರು ಶಿರೂರು ಘಟನೆ ಮತ್ತು ಅರ್ಜುನ್ ಜೀವನ ಸುತ್ತ, ನನ್ನ ಪುಸ್ತಕ ಆಧರಿಸಿ ಸಿನಿಮಾ ಮಾಡಲು ಸಹ ಯೋಚನೆ , ಯೋಜನೆ ನಡೆದಿದೆ ಎಂದು ಕೇರಳ ಶಾಸಕ ಮಂಜೇಶ್ವರ ಹೇಳಿದರು......
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 