ಪರೀಕ್ಷೆ ಬರೆದ ಓರ್ವ ವಿದ್ಯಾರ್ಥಿನಿ ; 14 ಜನ ಸಿಬ್ಬಂದಿ ಕೆಲಸ ನಿರ್ವಹಣೆ

ಪರೀಕ್ಷೆ ಬರೆದ ಓರ್ವ ವಿದ್ಯಾರ್ಥಿನಿ ; 14 ಜನ ಸಿಬ್ಬಂದಿ ಕೆಲಸ ನಿರ್ವಹಣೆ One student wrote the exam; 14 staff members handled the work

ವಿಜಯಪುರ 05 : ಓರ್ವ ವಿದ್ಯಾರ್ಥಿನಿಯ ಪರೀಕ್ಷೆಗಾಗಿ 14 ಜನ ಸಿಬ್ಬಂದಿ ಸಮರೆ​‍್ಣಯಿಂದ ಕಾರ್ಯ ನಿರ್ವಹಿಸಿದ ವಿಶೇಷ ಘಟನೆ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆದಿದೆ.   ಇಂದು ಶುಕ್ರವಾರ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗದ ಸಂಹಿತ ಸಿದ್ದಾಂತ ವಿಷಯದ ಪರೀಕ್ಷೆ ಆಯೋಜಿಸಿತ್ತು.   ಈ ಪರೀಕ್ಷೆಗೆ ಓರ್ವ ವಿದ್ಯಾರ್ಥಿನಿ ಮಾತ್ರ ಅರ್ಜಿ ಸಲ್ಲಿಸಿದ್ದರು.  ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ನಿಯಮದಂತೆ ಕಾಲೇಜಿನ 14 ಜನ ಸಿಬ್ಬಂದಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೋಂಡರು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.