ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು : ಸ್ವಾಮೀಜಿ

ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು : ಸ್ವಾಮೀಜಿ One should find peace and tranquility by engaging in religious activities: Swamiji

ಲೋಕದರ್ಶನ ವರದಿ 

ಯರಗಟ್ಟಿ 28: ಇಂದು ಮನುಷ್ಯ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು ಎಂದು ಶಿರಹಟ್ಟಿ ಜಗದ್ಗುರು ಫಕ್ಕೀರೇಶ್ವರ ಸಂಸ್ಥಾನ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ನೂತನವಾಗಿ ನಿರ್ಮಾಣಗೊಂಡ, ರಥದ ಲೋಕಾರೆ​‍್ಣ, ಆಧ್ಯಾತ್ಮಿಕ ಪ್ರವಚನ, ಸುಮಂಗಲೆಯರಿಗೆ ಉಡಿ ತುಂಬುವಿಕೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧ್ಯಾತ್ಮದ ರುಚಿ ಅಮೃತಕ್ಕೆ ಸಮಾನ. ಯಾರು ಆಧ್ಯಾತ್ಮದ ದಾರಿಯಲ್ಲಿ ನಡೆಯುತ್ತಾರೊ ಅವರು ಸದ್ಗುರುವಿನ ಆಶೀರ್ವಾದ ಪಡೆದುಕೊಳ್ಳುತ್ತಾರೆ ಎಂದರು. ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಮಹಾತ್ಮರ ಚಿಂತನೆ ಹಾಗೂ ಅಮೃತವಾಣಿಯಿಂದ ಕಷ್ಟ ಕಾರ​‍್ಪಣಯಗಳು ದೂರಾಗಿ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳನ್ನ ಹಾಗೂ ಗಣ್ಯರನ್ನು ಸನ್ಮಾನಿಸಿದರು. ವೇದ.ಮೂರ್ತಿ ಸದಾನಂದ ಶಾಸ್ತ್ರಿ, ನಿಂಗಯ್ಯ ಸ್ವಾಮೀಜಿ, ಚಂದ್ರಯ್ಯ ಹಿರೆಮಠ, ಬಸಲಿಂಗಯ್ಯ ಹಿರೇಮಠ, ವಿಶಾಲ ಹಿರೆಮಠ, ಸಿದ್ದೇಶಕುಮಾರ ಹೊಳಲ, ಮಾಜಿ ಕೆಎಂಎಫ್ ಅಧ್ಯಕ್ಷ ಎಸ್‌.ಎಸ್‌.ಮುಗಳಿ, ಮುಖಂಡ ಸಂಗ್ರಾಮ ಗೌಡರ, ನಾಗಪ್ಪ ಚವಡಪ್ಪನವರ, ಸಿದ್ದು ಕಡಕೋಳ, ಸೋಮಲಿಂಗಪ್ಪ ಚವಡಪ್ಪನವರ, ಬಸವಣೆಪ್ಪ ವಂಟಮೂರಿ, ಬಸವರಾಜ ಯರಗಟ್ಟಿ, ರಾಯಪ್ಪ ರಾಯಣ್ಣವರ, ಗೌಡಪ್ಪ ಕಡಕೋಳ, ಅರ್ಜುನ ಸವದತ್ತಿ, ರಾಜು ಅಂದಾನಿ ಮತ್ತಿತರಿದ್ದರು. 28 ಯರಗಟ್ಟಿ02ಪೋಟೊ ಶೀರ್ಷಿಕೆ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶ್ರಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ನೂತನವಾಗಿ ನಿರ್ಮಾಣಗೊಂಡ, ರಥದ ಲೋಕಾರೆ​‍್ಣ, ಆಧ್ಯಾತ್ಮಿಕ ಪ್ರವಚನ, ಸುಮಂಗಲೆಯರಿಗೆ ಉಡಿ ತುಂಬುವಿಕೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಶಿರಹಟ್ಟಿ ಜಗದ್ಗುರು ಫಕ್ಕೀರೇಶ್ವರ ಸಂಸ್ಥಾನ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ನೀಲಕಂಠ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ ಇತರರಿದ್ದರು.