ಕಾರಾತ್ಮಕವಾಗಿ ವಿಚಾರ ಮಾಡುವ ವ್ಯಕ್ತಿತ್ವ ಬೆಳಿಸಿಕೊಳ್ಳಬೇಕು : ಭಾರತೀ ಅಕ್ಕ

ಕಾರಾತ್ಮಕವಾಗಿ ವಿಚಾರ ಮಾಡುವ ವ್ಯಕ್ತಿತ್ವ ಬೆಳಿಸಿಕೊಳ್ಳಬೇಕು : ಭಾರತೀ ಅಕ್ಕ One should develop a personality that thinks positively: Bharathi Akka

            ಶಿಗ್ಗಾವಿ 11 : ಇಂದಿನ ದಿನಗಳಲ್ಲಿ ಸಮಾಜದಲ್ಲಿ ಮೋಸ ಮಾಡುವವರ ಹಾಗೂ ಮೋಸ ಹೋಗುವವರ ಸಂಖ್ಯೆ ಹೆಚ್ಚಿದೆ ಆದ್ದರಿಂದ ನಾವು ಜಾಗೃತರಾಗಬೇಕು ಎಂದು ಈಶ್ವರಿ ವಿಶ್ವವಿದ್ಯಾಲಯ ಭಾರತಿ ಅಕ್ಕ ಹೇಳಿದರು. ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ಜೆ.ಸಿ.ಐ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ನಕಾರಾತ್ಮಕ ಭಾವನೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇದಕ್ಕೆ ಪರಿಹಾರ ದ್ಯಾನದ ಮೂಲಕ ಸಕಾರಾತ್ಮಕವಾಗಿ ವಿಚಾರವನ್ನು ಮಾಡುವ ವ್ಯಕ್ತಿತ್ವ ಬೆಳಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು. 

            ಜೆ.ಸಿ.ಐ ಭಾರತ ರಾಷ್ಟ್ರೀಯ ಕಾರ್ಯನಿರ್ವಹಾಹಕ ನಿರ್ದೇಶಕ ಜೆ.ಎಫ್‌.ಎಸ್ ಅನುಷಗೌಡ ಮಾತನಾಡಿ ರಾಷ್ಟ್ರೀಯ ಮಟ್ಟದಲ್ಲಿ ನಾನು ಗುರುತಿಸಿಕೊಳ್ಳಲು ಶಿಗ್ಗಾವಿ ಜೆ.ಸಿ. ಕೊಡುಗೆ ಬಹಳ ಅನನ್ಯವಾಗಿದೆ ಹಾಗೂ ಸಾರ್ವಜನಿಕರಿಗೆ ಜೆ.ಸಿ.ಐ ಮೂಲಕ ಒಳ್ಳೆಯ ಸಂದೇಶ ನೀಡಬೇಕು ಅಲ್ಲದೇ ನಮ್ಮ ಜೊತೆಗೆ ಬಂದವರಿಗೆ ವ್ಯಕ್ತಿತ್ವ ವಿಕಸನವನ್ನು ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.  ಜೆ.ಸಿ. ವಲಯ ಉಪಾಧ್ಯಕ್ಷ ಕುಮಾರ ಬೆಣ್ಣಿ ಮಾತನಾಡಿ ಹಳೆಯ ಹಾಗೂ ಹೊಸ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

            ಮಾಜಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು ಜೆ.ಸಿ.ಐ ಸಂಸ್ಥೆ ಮುಖಾಂತರ ತಾಲೂಕಿನಲ್ಲಿ ಒಳ್ಳೆಯ ಸಮಾಜಪರ ಕೆಲಸ ಕಾರ್ಯಗಳು ನಡೆಯುತ್ತಿವೆ ಅದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು. ಬರುವ ದಿನಗಳಲ್ಲಿ ರೈತರ ಪರ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡೋಣ ಎಂದರು.ಅಧ್ಯಕ್ಷತೆ ತುಕಾರಾಮ ಎನ್ ಜಾಧವವಹಿಸಿದ್ದರು, ನೂತನ ಅಧ್ಯಕ್ಷರಾಗಿ ಅನುಪಮಾ ಡಿ ತೋಟಗೇರ, ಕಾರ್ಯದರ್ಶಿಯಾಗಿ ಪೂರ್ಣಿಮಾ ಬಳಿಗಾರ, ಖಚಾಂಚಿಯಾಗಿ ತನ್ಮಯ.ಜಿ.ಯಲಿಗಾರ, ಉಪಾಧ್ಯಕ್ಷರಾಗಿ ಸೈಪ್ ಹುಲಗೂರ, ಪ್ರತೀಕ ಕೊಳೇಕರ, ನೀತೀನ ಬ್ರಹ್ಮಾವರ, ವಾಣಿ ಜಾಧವ,ವೀರ​‍್ಪ.ಎನ್‌. ಬಾರಕೇರ, ರಮೇಶ ಹಿರಗಪ್ಪನವರ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಹಾಂತೇಶ ಬಳಿಗಾರ, ಜಿ.ಎನ್‌.ಯಲಿಗಾರ, ರಂಜನಾ ಓಂಧಕರ, ಪ್ರಕಾಶ ಓಂಧಕರ, ಬಾಬಾಜಾನ ಹುಲಗೂರ, ಗುರುರಾಜ ಹುಚ್ಚಣ್ಣನವರ,ಡಾ. ಚಂದ್ರಿಕಾ ಪಾಟೀಲ,ಡಾ.ಕುಮಾರಗೌಡ ಪಾಟೀಲ,ಡಾ.ಡಿ.ಎ.ಗೊಬ್ಬರಗುಂಪಿ,ಡಿ.ಆರ್‌.ತೋಟಿಗೇರ, ಅನಿತಾ ಗೊಬ್ಬರಗುಂಪಿ, ಸೇರಿದಂತೆ ಜೆ.ಸಿ.ಐ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೆ.ಸಿ.ಕೆ.ಬಿ.ಚನ್ನಪ್ಪ ಸ್ವಾಗತಿಸಿದರು, ಜೆ.ಸಿ.ರಾಘವೇಂದ್ರ ದೇಶಪಾಂಡೆ, ಕಾರ್ಯಕ್ರಮ ನಿರ್ವಹಿಸಿದರು.