ಮನದ ಕಲ್ಮಶಗಳನ್ನು ತ್ಯಜಿಸಿ ಶುದ್ಧಭಾವದಿಂದ ಬದುಕಬೇಕು...
One should abandon the impurities of the mind and live with purity...
ವಿಜಯಪುರ, 25 ; ಅಹಂ ಮೇತಿ’ ಎಂಬಂತೆ ಎಲ್ಲವು ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊಲಗಲಿ. ‘ಪರೋಪಕಾರಂ ಇದಂ ಶರೀರಂ’ ಎಂಬ ಶ್ಲೋಕದಂತೆ ಜೀವನ ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಮಾತನಾಡುತ್ತಾ, ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ. ಮೋಹ. ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕು. ಅದಕ್ಕಾಗಿ ನಾವೆಲ್ಲರೂ ಇಂದು ಸಂಸಾರವೆಂಬ ಭವಸಾಗರದಿಂದ ಹೊರಬಂದು ಬಸವಣ್ಣನವರ ವಚನದಂತೆ ”ನಡೆಯಲರಿಯದೇ, ನುಡಿಯಲರಿಯದೇ ಲಿಂಗವ ಪೂಜಿಸಿ ಫಲವೇನು? ಇತರರ ಸುಖ ಎನ್ನ ಸುಖ, ಪರರ ದುಃಖ ಎನ್ನ ದುಃಖ” ಎಂಬಂತೆ ಪರೋಪಕಾರಿಯಾಬೇಕು ಎಂಬುದನ್ನು ಅರಿತು ಸನ್ಮಾರ್ಗದ ದಾರಿ ಕಂಡುಕೊಂಡು ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯುತವಾಗಲು ಇಂತಹ ಸತ್ಸಂಗ ಭಾಗವಹಿಸಿ ಶರಣರ ಜೀವನಾದರ್ಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಸೇನಾ ನಗರದ ಹವಾಲ್ದಾರ ಕಾಲನಿಯ ಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ನವಾರಾತ್ರಿ ಉತ್ಸವದದಲ್ಲಿ ”ಶರಣರ ವಚನಗಳಲ್ಲಿ ಜೀವನ-ಮೌಲ್ಯಗಳು” ವಿಷಯ ಕುರಿತು ಆಯೋಜಿಸಿದ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ನಿವೃತ್ತ ಸೇನಾನಿ ರಾವಸಾಹೇಬ ಮೆಣಸಂಗಿ ಹಾಗೂ ಪ್ರೇಮಾ ಅಕ್ಕಿ ಇವರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ವಿಠ್ಠಲ ಜಗತಾಪ, ಬಿ.ಡಿ.ಕಡಕೋಳ, ಪ್ರೊ. ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ನಿಂಗಪ್ಪ ನಿಂಬಾಳಕರ, ಗುರುಬಸಯ್ಯ ಹಿರೇಮಠ, ಸಾಬು ಅಗ್ರಾಣಿ, ಲಕ್ಷ್ಮೀ ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳಿ, ಉಪಾಧ್ಯಕ್ಷೆ ಶಕುಂತಲಾ ಅಂಕಲಗಿ, ಕಾರ್ಯದರ್ಶಿ ಶೋಭಾ ಚವ್ಹಾಣ, ಜ್ಯೋತಿ ಜೊಳ್ಳೆ, ಸಾವಿತ್ರಿ ಅಗ್ರಾಣಿ, ಜ್ಯೋತಿ ಹಿರೇಮಠ, ಭವಾನಿ ಜಾಧವ, ಸರೋಜಾ ಬಾಗಲಕೋಟ, ಭಾರತಿ ಕಿಚಡಿ ಇನ್ನಿತರರು ಸಹ ಉಪಸ್ಥಿತರಿದ್ದರು.
ಸರೋಜಾ ಬಾಗಲಕೋಟ ಅವರು ಚಾಂಮುಂಡಿ ದೇವಿಯ ಪ್ರಾರ್ಥನಾ ಗೀತೆ ಪ್ರಚುರಪಡಿಸಿದರು. ಗುರುಬಸಯ್ಯ ಹಿರೇಮಠ ಅವರು ನಿರೂಪಿಸಿದರು, ಕಾರ್ಯಕ್ರಮದಲ್ಲಿ ನವರಸಪುರ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಭಾಗವಹಿಸಿ ಮಹಾಪ್ರಸಾದ ಸ್ವೀಕರಿಸಿ ದೇವಿಗೆ ಭಕ್ತಿ-ಭಾವದಿಂದ ನಮಿಸಿ ಅನುಗ್ರಹ ಪಡೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 