ಕಾರ ಚಾಲಕನ ನಿರ್ಲಕ್ಷ್ಯ ಮರಕ್ಕೆ ಡಿಕ್ಕಿ ಸ್ಥಳದಲ್ಲಿಯೇ ಒಬ್ಬ ಸಾವು
One person died on the spot after a car driver's negligence caused the car to hit a tree
ಲಕ್ಷ್ಮೇಶ್ವರ" 04 ;ಶುಕ್ರವಾರ ದಿ 2ರಂದು ಬೆಳಗಿನ ಜಾವಾ 01:30 ಗಂಟೆ ಸುಮಾರಿಗೆ ಕಾರ ಚಾಲಕನ ನಿರ್ಲಕ್ಷತನದಿಂದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟು ಕಾರ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ 2 ನೇ ತಾರೀಕು ಶುಕ್ರವಾರ ಬೆಳಗಿನ ಜಾವ ನಡೆದಿದೆ ಆರೋಪಿತನಾದ, ಜಗದೀಶ ತಂದೆ ರಮೇಶ ಜೈನಾಪೂರ ಸಾ:ಇಳಕಲ್ ಇವನು ಕಾರ್ ನಂಬರ್. ಕೆಎ.51 ಎಂಡಿ.2369 ನೇದ್ದನ್ನು ಸವಣೂರ ಕಡೆಯಿಂದ ಲಕ್ಷೇಶ್ವರ ಕಡೆಗೆ ನಡೆಸಿಕೊಂಡು ಬರುವಾಗ ಅಗಡಿ ಕಾಲೇಜ್ ದಾಟಿ ಸ್ವಲ್ಪ ಮುಂದೆ ಲಕ್ಷೇಶ್ವರ ಕಡೆಗೆ ಅತೀಜೋರಾಗಿ ನಿರ್ಲಕ್ಷತನದಿಂದ ಮನುಷ್ಯ ಪ್ರಾಣಕ್ಕೆ ಹಾನಿಯಾಗುವಂತೆ ನಡೆಸಿ ಕಾರ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಕಾರನ್ನು ರಸ್ತೆಯ ಬಲಗಡೆ ಇರುವ ಹುಣಸಿಮರಕ್ಕೆ ಢಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ಭಾರಿ ಸ್ವರೂಪದ ಪೆಟ್ಟುಗಾಯ ಗೊಂಡಿದ್ದಲ್ಲದೆ ಕಾರ ನಲ್ಲಿದ್ದ ರಾಮನಗೌಡ ಪಾಟೀಲ ಹಾಗೂ ಭೀಮಣ್ಣ ವಾಲಿಕಾರ ಎಂಬುವರಿಗೆ ಭಾರಿ ಸ್ವರೂಪದ ಪೆಟ್ಟುಗಾಯ ಕೊಂಡಿದ್ದು ಹುಚ್ಚಯ್ಯ ಹಿರೇಮಠ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನೆ ನಡೆದಿದೆ ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 