ಕಾರ ಚಾಲಕನ ನಿರ್ಲಕ್ಷ್ಯ ಮರಕ್ಕೆ ಡಿಕ್ಕಿ ಸ್ಥಳದಲ್ಲಿಯೇ ಒಬ್ಬ ಸಾವು

ಕಾರ ಚಾಲಕನ ನಿರ್ಲಕ್ಷ್ಯ ಮರಕ್ಕೆ ಡಿಕ್ಕಿ ಸ್ಥಳದಲ್ಲಿಯೇ ಒಬ್ಬ ಸಾವು  One person died on the spot after a car driver's negligence caused the car to hit a tree

ಲಕ್ಷ್ಮೇಶ್ವರ"  04 ;ಶುಕ್ರವಾರ ದಿ 2ರಂದು ಬೆಳಗಿನ ಜಾವಾ 01:30 ಗಂಟೆ ಸುಮಾರಿಗೆ ಕಾರ ಚಾಲಕನ ನಿರ್ಲಕ್ಷತನದಿಂದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟು ಕಾರ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ 2 ನೇ ತಾರೀಕು ಶುಕ್ರವಾರ ಬೆಳಗಿನ ಜಾವ ನಡೆದಿದೆ ಆರೋಪಿತನಾದ, ಜಗದೀಶ ತಂದೆ ರಮೇಶ ಜೈನಾಪೂರ ಸಾ:ಇಳಕಲ್ ಇವನು ಕಾರ್ ನಂಬರ್‌. ಕೆಎ.51 ಎಂಡಿ.2369 ನೇದ್ದನ್ನು ಸವಣೂರ ಕಡೆಯಿಂದ ಲಕ್ಷೇಶ್ವರ ಕಡೆಗೆ ನಡೆಸಿಕೊಂಡು ಬರುವಾಗ ಅಗಡಿ ಕಾಲೇಜ್ ದಾಟಿ ಸ್ವಲ್ಪ ಮುಂದೆ ಲಕ್ಷೇಶ್ವರ ಕಡೆಗೆ ಅತೀಜೋರಾಗಿ ನಿರ್ಲಕ್ಷತನದಿಂದ ಮನುಷ್ಯ ಪ್ರಾಣಕ್ಕೆ ಹಾನಿಯಾಗುವಂತೆ ನಡೆಸಿ ಕಾರ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಕಾರನ್ನು ರಸ್ತೆಯ ಬಲಗಡೆ ಇರುವ ಹುಣಸಿಮರಕ್ಕೆ ಢಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ಭಾರಿ ಸ್ವರೂಪದ ಪೆಟ್ಟುಗಾಯ ಗೊಂಡಿದ್ದಲ್ಲದೆ ಕಾರ ನಲ್ಲಿದ್ದ ರಾಮನಗೌಡ ಪಾಟೀಲ ಹಾಗೂ ಭೀಮಣ್ಣ ವಾಲಿಕಾರ ಎಂಬುವರಿಗೆ ಭಾರಿ ಸ್ವರೂಪದ ಪೆಟ್ಟುಗಾಯ ಕೊಂಡಿದ್ದು ಹುಚ್ಚಯ್ಯ ಹಿರೇಮಠ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನೆ ನಡೆದಿದೆ ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು