ಒಬ್ಬ ವ್ಯಕ್ತಿ, ಒಂದು ಮತ: ಉಮಾಶ್ರೀ
One person, one vote said Umashree
ಮಹಾಲಿಂಗಪುರ 28: ಡಾ.ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ಕೊಟ್ಟಿದ್ದಾರೆ. ಈ ಸಂವಿಧಾನ ಬದ್ಧ ಹಕ್ಕನ್ನು ದುರುಪಯೋಗಪಡಿಸಿಕೊಳ್ಳದೆ ಒಬ್ಬ ವ್ಯಕ್ತಿ, ಒಂದು ಮತ ನೀಡಬೇಕು. ಮತಗಳನ್ನು ಮಾರಿಕೊಳ್ಳದೆ, ಮತಗಳ್ಳತನಕ್ಕೆ ಸಾಕ್ಷಿಯಾಗದೆ ಉತ್ತಮ ರೀತಿಯಲ್ಲಿ ಮತವನ್ನು ಚಲಾಯಿಸಬೇಕು.ಈಗಾಗಲೇ ಬಿಜೆಪಿ ಸರ್ಕಾರ ಮತಗಳ್ಳತನದಿಂದ ರಚನೆಯಾಗಿದೆ ಎಂದು ಸಾಕ್ಷಿ ಸಮೇತ ರಾಹುಲ್ ಗಾಂಧಿಯವರು ಪ್ರಸ್ತುತಪಡಿಸಿದ್ದಾರೆ.ಆದುದರಿಂದ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ನೈಜತೆಯನ್ನು ತಿಳಿಸಿ ಹಾಗೂ ಸಹಿ ಸಂಗ್ರಹಿಸಿ ಜನರ ಗಮನಕ್ಕೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಉಮಾಶ್ರೀ ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿಯ ಶ್ರೀ ನೂಲಿ ಚಂದಯ್ಯ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ತೇರದಾಳ ವಿಧಾನಸಭಾ ಮತಕ್ಷೇತ್ರದ ಮತದಾರರ ಹಕ್ಕುಗಳಿಗಾಗಿ ನಡೆದ ಮತಗಳ್ಳತನ(ವೋಟ್ ಚೋರಿ) ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನೀಲಕಂಠ ಮುತ್ತೂರ, ರಾಜು ಭದ್ರಣ್ಣವರ, ಪ್ರಕಾಶ ಮಮದಾಪುರ, ಸಿದ್ದಪ್ಪ ಬೇನೂರ, ವಿನೋದ ಸಿಂಪಿ, ರಾಜೇಶ ಭಾವಿಕಟ್ಟಿ, ಈಶ್ವರ ಚಮಕೇರಿ, ಮಹಾಲಿಂಗ ಭಜಂತ್ರಿ, ಸೈಯದ ಯಾದವಾಡ, ಸೂರಜ್ ಅವಟಿ, ವಿಠ್ಠಲ ಕುಳಲಿ, ಪರಶುರಾಮ ಮೇತ್ರಿ, ಬಸವರಾಜ ಮಾವಿನಹಿಂಡಿ, ಚಿನ್ನಪ್ಪ ನಿಂಗನೂರ, ಶಂಕರ ಕಡಬಲ್ಲವರ, ಸಿರಾಜ ಪೆಂಡಾರಿ, ಶ್ರೀಶೈಲ ದೊಡಮನಿ, ಭಾಷಾ ಬಿಸ್ತಿ, ಹುಸೇನ ಉಕ್ಕಲಿ, ಮಧು ಮಾವಿನಹಿಂಡಿ, ಶೆಟ್ಟೆಪ್ಪ ತಳಗಡೆ, ಚನ್ನಪ್ಪ ಮುಕ್ಕೆನ್ನವರ, ದಾನೇಶ ಮೇತ್ರಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 