ಎಸ್‌ಐಆರ್ ಬಗ್ಗೆ ಒಂದು ದಿನದ ಕಾರ್ಯಾಗಾರ ಇಂದು

ಎಸ್‌ಐಆರ್ ಬಗ್ಗೆ ಒಂದು ದಿನದ ಕಾರ್ಯಾಗಾರ ಇಂದು One-day workshop on SIR today

ಲೋಕದರ್ಶನ ವರದಿ 

ಮಹಾಲಿಂಗಪುರ 25 : ಇವತ್ತಿನ ದಿನಮಾನದಲ್ಲಿ ಚುನಾವಣೆ ವಿಷಯದಲ್ಲಿ ಎಸ್‌ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ಮ್ಯಾಪಿಂಗ್ ನಡೆದಿದ್ದು, ಈ ಕುರಿತು ಹಲವಾರು ಜನರಲ್ಲಿ ಗೊಂದಲಗಳಿದ್ದು, ದೇಶದಲ್ಲಿ ಹುಟ್ಟಿದ ಯಾವ ವ್ಯಕ್ತಿ ಕೂಡ ಎಸ್‌ಐಆರ್ ನೇಪದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಮೇ 26ರಂದು ಬೆಳಗ್ಗೆ 10ಗಂಟೆಗೆ ಸ್ಥಳೀಯ ಗೋಕಾಕ್ ರಸ್ತೆಯಲ್ಲಿರುವ ಶರಣ ಆಸ್ಪತ್ರೆಯ ಆವರಣದಲ್ಲಿ ಒಂದು ದಿನದ ಕಾರ್ಯಗಾರ ಏರಿ​‍್ಡಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಸಂಘಟನೆ ಕಾರ್ಯದರ್ಶಿ ಅರ್ಜುನ್ ಹಲಗಿಗೌಡರ ಹೇಳಿದರು. 

ಪಟ್ಟಣದ ಶರಣ ಆಸ್ಪತ್ರೆಯಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮ್ಯಾಪಿಂಗ್ ನ ಎಲ್ಲ ಗೊಂದಲಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ಯಾವ ಯಾವ ದಾಖಲಾತಿಗಳನ್ನು ತಯಾರಿಸಿಕೊಳ್ಳಬೇಕು ಮತ್ತು ಯಾವ ಯಾವ ಪ್ರಶ್ನೆಗಳನ್ನು ಕೇಳುತ್ತಾರೆ, ಒಂದು ವೇಳೆ ಮ್ಯಾಪಿಂಗ್ ನಿಂದ ಹೊರಗಡೆ ಉಳಿದರೆ ಮುಂದೆ ಯಾವ ಯಾವ ದಾಖಲಾತಿಗಳನ್ನು ನಿರ್ವಹಿಸಬೇಕು, ಯಾವ ಕಚೇರಿಗೆ ಅರ್ಜಿ ಕೊಡಬೇಕು ಎಂಬ ಸಂಪೂರ್ಣ ವಿಷಯದ ಕುರಿತು ಸಾರ್ವಜನಿಕರಿಗೆ ಮುಕ್ತವಾಗಿ ಚರ್ಚೆಗೆ ಅವಕಾಶ ಕೊಡಲಾಗಿದೆ. ಈ ಬಗ್ಗೆ ವಿಶೇಷ ತರಬೇತಿಗಳನ್ನು ನೀಡಲು ಪರಿಣಿತರಾದ ಮುಧೋಳದ ಹಿರಿಯ ವಕೀಲರಾದ ಪ್ರಕಾಶ್ ವಸ್ತ್ರದ್, ಅಂಬಿ ವಕೀಲರು,

ಬೆಂಗಳೂರಿನ ಬಸವರಾಜ ಮರಗೋಡ, ಕೊಪ್ಪಳ ಮತ್ತು ಕಲ್ಬುರ್ಗಿ ಜಿಲ್ಲೆಯ ಲಕ್ಷ್ಮಣ ಮಾಂಡಲಗೇರಿ, ಬಾಗಲಕೋಟೆ ಜಿಲ್ಲೆಯ ಪವಿತ್ರಾ ಜಕ್ಕಪ್ಪನವರ ಈ ಎಲ್ಲ ಕೋ ಆರ್ಡಿನೇಟರ್ ಭಾಗವಹಿಸಿ ಸೂಕ್ತ ತರಬೇತಿ ನೀಡಲಿದ್ದಾರೆ. ಆದಕಾರಣ ಎಲ್ಲ ಸಮಾಜದ, ಎಲ್ಲ ಪಕ್ಷದ ಜನರು ಮುಕ್ತವಾಗಿ ಬಂದು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದ್ದಾರೆ. ಈ ಸಂದರ್ಭದಲ್ಲಿ ಸೈಯ್ಯದ್ ಹಳಿಂಗಳಿ, ಯುನೂಸ್ ಬೀಳಗಿ, ಕುತುಬೂದಿನ್ ಜಲಗೇರಿ, ಸೈಯ್ಯದ್ ಅಂಬಿ, ಸಮೀರ ಅಂಬಿ, ಮುಬಾರಕ ಯಕ್ಷಂಬಿ ಇದ್ದರು.