ರೈತರಿಂದ ವಿವಿಧ ಬೇಡಿಕೆಗಳಿಗಾಗಿ ಒಂದು ದಿನ ಸಾಂಕೇತಿಕ ಧರಣಿ
One-day symbolic sit-in by farmers for various demands
ಇಂಡಿ 21: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಕರ್ನಾಟಕ ಪ್ರಾಂತ ವಿಜಯಪೂರ ವತಿಯಿಂದ ವಿಜಯಪೂರ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಒಂದು ದಿನ ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಂಡರು ಈ ಸಂದರ್ಭದಲ್ಲಿ ಮಾತನಾಡಿದ ಭಾರತಿಯ ಕಿಸಾನ್ ಸಂಘದ ಉತ್ತರ ಕರ್ನಾಟಕ ಪ್ರಾಂತ ಉಪಾಧ್ಯಕ್ಷರಾದ ಮಲ್ಲನಗೌಡ ಪಾಟೀಲ ಅವರು ಬರುವ ಮುಂಗಡ ಪತ್ರ ಅಧಿವೇಶನದಲ್ಲಿ ವಿಜಯಪೂರ ಜಿಲ್ಲೆಯ ಸಮಗ್ರ ನೀರಾವರಿಗಾಗಿ ಹಣ ಮೀಸಲು ಇಡಬೇಕು ಹಾಗೂ ಆಲಮಟ್ಟಿ ಅಣೆಕಟ್ಟೆ ಎತ್ತರ 524.19 ಮೀಟರ್ ಎತ್ತರಿಸಬೇಕು ಹಾಗೂ ಮುಳುಗಡೆಯಾದ ಸಂತ್ರಸ್ತರಿಗೆ ಪರಿಹಾರ ಕೊಡಲು ಸರ್ಕಾರ ಮುಂಗಡ ಪತ್ರದಲ್ಲಿ ಹಣ ಮೀಸಲು ಇಡಬೇಕು ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರುನಾಥ ಬಗಲಿ ಮಾತನಾಡಿ ಇಂಡಿಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಡಿದ್ದು ಅದರ ಮೂಲಕ ಬೆಂಬಲ ಬೆಲೆಯನ್ನು ಸರ್ಕಾರ ಪೋಷಿಸಿ ಆವರ್ತ ನಿಧಿಯನ್ನು ಇಟ್ಟು ಲಿಂಬೆ ಬೆಳೆಯನ್ನು ಖರೀದಿಸಿ ಅನುಕೂಲ ಮಾಡಿಕೊಡಬೇಕು ಹಾಗೂ ಮೆಕ್ಕೆಜೋಳ ಹಾಗೂ ತೋಗರಿ ಬೆಳೆಗಳಿಗೆ ಬೆಲೆ ಸಿಗುವಂತೆ ಸರ್ಕಾರ ಪೋಷಿಸಬೇಕು.ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿಗೆ ಪ್ರಾರಂಬಿಸಬೇಕು ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಬೀಮಸಿಂಗ್ ಕೊಕರೆ ಮಾತನಾಡಿ ಗುತ್ತಿ ಬಸವಣ್ಣ ಚಿಮ್ಮಲಗಿ (ನಾಗಠಾಣ) ಮುಳವಾಡ ಇಂಡಿ ಬ್ರ್ಯಂಚ್ ಕೆನಾಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.ತಿಡಗುಂದಿ ಶಾಖಾ ಕಾಲುವೆಯ ಎಲ್ಲಾ ವಿತರಣಾ ಕಾಲುವೆಗಳು ಶೀಘ್ರ ಟೆಂಡರ್ ಕರೆದು ಕೆಸಲ ಪೂರ್ಣಗೊಳಿಸಬೇಕು ಭೂಯ್ಯಾರ ಸಂಕ ಅಣಚಿ ಚಡಚಣ ಏತ ನೀರಾವರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳಿಸಬೇಕು.ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಹದಿನೈದು ದಿನಗಳ ಒಳಗೆ ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಈರಣ್ಣ ಗೊಟ್ಯಾಳ ,ಅನೀಲಗೌಡ ಪಾಟೀಲ ಶಾಂತಪಗೌಡ ಪಾಟೀಲ ರವಿಂದ್ರ ಮೇಡೆದಾರ ಚನ್ನಪ್ಪ ಮಿರಗಿ ಚಿದಾನಂದ ಮದರಿ ಚಂದಪ ಮಿರಗಿ ಶರಣಪ್ಪ ತಾರಾಪೂರ ಪ್ರಕಾಶ ಇಂಡಿ ಚಂದು ನಿರಾಳೆ ಶಂಕ್ರ್ಪ ಆಕಳವಾಡಿ ರಫೀಕ್ ಮುಲ್ಲಾ ದಯಾನಂದ ಶಿಂಧೆ ಬಾಬುರಾವ್ ಗುಡ್ಡದ ರಾಜೇಂದ್ರ ಪಾಟೀಲ ಎಸ್ ಬಿ ಬಿರಾದಾರ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿಜಯಪೂರ ಜಿಲ್ಲಾ ಅಧಿಕಾರಿ ಕೆ ಆನಂದ ಅವರು ರೈತರ ಮನವಿ ಸ್ವೀಕರಿಸಿ ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 