ಎಲ್ ಐ ಸಿ ನೌಕರರಿಂದ ಒಂದು ದಿನದ ಸಾರ್ವತ್ರೀಕ ಮುಷ್ಕರ
One-day general strike by LIC employees
ಲೋಕದರ್ಶನ ವರದಿ
ಕೊಪ್ಪಳ 13: ನಗರದ ಎಲ್ ಐ ಸಿ ಕಛೇರಿ ಮುಂದೆ ಒಂದು ದಿನದ ನೌಕರರು ಸಾರ್ವತ್ರೀಕ ಮುಷ್ಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಮುಷ್ಕರ ಮಾಡಿದರು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಅಧ್ಯಕ್ಷರಾದ ಶೇಖರ್ಪ ಎಲ್‌ಐಸಿ ಯಲ್ಲಿ 3 ಮತ್ತು 4 ವರ್ಗಗಳ ನೇಮಕಾತಿ ಮತ್ತು 1995 ರ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ವಿಮೆ ಉದ್ಯಮೇಯಲ್ಲಿ ವಿದೇಶಿ ನೇರ ಬಂಡವಾಳ 100ಅ ಮಾಡಿರುವ ಕೇಂದ್ರ ಸರಕಾರ ಮತ್ತು ನೌಕರರಿಗೆ ಜಾರಿ ಮಾಡುತ್ತಿರುವ 4 ಲೇಬರ್ ಕೋಡುಗಳನ್ನು ಕೂಡಲೆ ರದ್ದು ಮಾಡಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರಿಕಾಂತ ಗೊಂಡಬಾಳ, ರಮೇಶ, ಶ್ರೀಪಾದ, ಸಿದ್ದಪ್ಪ, ವಿನಯಕುಮಾರ, ವಿಜಯಕುಮಾರ, ಚಂದ್ರಶೇಖರ, ಲಕ್ಷ್ಮಯ್ಯ, ಶ್ರಿಕಾಂತ, ಚಂದನ ಹಾಗೂ ಮಹಿಳಾ ಸಂಗಾತಿಗಳಾದ ಸುಕನ್ಯಾ , ಭಾರತಿ, ಪುಷ್ಪಾವತಿ, ಮಹಾಲಕ್ಷಿ, ಶಿರಿಷಾ ಉಪಸ್ಥಿತರಿದ್ದು ಮುಷ್ಕರವನ್ನು ಯಶಸ್ವಿಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 