ವೈರಿ ಪಡೆಯನ್ನು ಹಿಮ್ಮೆಟ್ಟಿಸಿದ ಧೀರ ಮಹಿಳೆ ಒನಕೆ ಓಬವ್ವ
Onake Obavwa, the brave woman who repelled the enemy army
ರಾಣೆಬೆನ್ನೂರು 12: ಚನ್ನವೀರತ್ವ ಮತ್ತು ಸೂರತ್ವದ ಮೂಲಕ ದೇಶದ ರಕ್ಷಣೆಯಲ್ಲಿ ಕೆಚ್ಚೆದೆಯ ವೀರ ಮಹಿಳೆಯಾಗಿ ತನ್ನ ಪರಾಕ್ರಮದ ಮೂಲಕ ವೈರಿಗಳನ್ನು ಹೊಡೆದಟ್ಟಿ ದುರ್ಗವನ್ನು ರಕ್ಷಿಸಿ, ಸ್ತ್ರೀ ಕುಲಕ್ಕೆ ಮಾದರಿಯಾದ ಧೀರ ಮಹಿಳೆ ಒನಕೆ ಓಬವ್ವಳಾಗಿದ್ದಾಳೆ ಎಂದು ಸ್ವಾ.ಕ.ವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.
ನಗರದ ತಹಶಿಲ್ದಾರ್ ಕಚೇರಿ,, ಆಡಳಿತ ಸೌಧ ಭವನದಲ್ಲಿ ಆಯೋಜಿಸಿದ್ದ ವೀರ ಮಹಿಳೆ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಒನಕೆ ಓಬವ್ವ ಅಸಮಾನ್ಯಳಲ್ಲಿ ಅಸಮಾನ್ಯಳು, ತನ್ನ ಕ್ಷೇತ್ರದ ರಕ್ಷಣೆಯ ಸಂದರ್ಭದಲ್ಲಿ ವೈರಿ ಪಡೆಗಳು ಒಳ ನುಗ್ಗುವಾಗ ತನ್ನ ವೀರತ್ವವನ್ನು ತೋರಿಸಿ ವೈರಿ ಪಡೇಗಳನ್ನು ಹಿಮ್ಮೆಟ್ಟಿಸಿದ ಈ ದೇಶ ಕಂಡ ಧೀರ ಮಹಿಳೆಯಾಗಿದ್ದವಳು ಎಂದರು.
ಛಲವಾದಿ ಮಹಾಸಭಾ ತಾಲೂಕಾ ಅಧ್ಯಕ್ಷ ಬಸವರಾಜ್ ಸಾವಕ್ಕನವರ ಮಾತನಾಡಿ, ಒನಕೆ ಓಬವ್ವ ಕೇವಲ ಐತಿಹಾಸಿಕ ಮಹಿಳೆಯಾಗಿರದೇ, ಅವಳು ಈ ದೇಶದ ಮತ್ತು ನಾಡಿನ ಹೆಮ್ಮೆಯ ಸಾಂಸ್ಕೃತಿಕ ಮಹಿಳೆಯಾಗಿದ್ದಾಳೆ. ಅಂತಹ ವೀರ ಮಹಿಳೆಯ ವೃತ್ತವನ್ನು ರಾಣೆಬೆನ್ನೂರು ನಗರದಲ್ಲಿ ಪ್ರತಿಷ್ಠಾಪಿಸಲು ನಗರಸಭೆ ಆಡಳಿತ, ರಾಜಕೀಯ ನಾಯಕರು ಇಂದಾದರೂ ತಮ್ಮ ಇಚ್ಛಾಶಕ್ತಿ ಮೆರೆಯಬೇಕು ಎಂದು ಹೇಳಿದರು.ಕನ್ನಡ ಪರ ಸಂಘಟನೆಯ ಮುಖಂಡರಾದ ಗಣೇಶ್ ಗೋಣಿಬಸಮ್ಮನವರ,ಯಲ್ಲಪ್ಪ ಮರಾಠೆ , ಮಂಜುನಾಥ್ ಕೋಲಕಾರ, ಸಂಜೀವ ಮದಗುಣಕಿ, ತಾ. ಕ. ಸಾ.ಪರಿಷತ್ ಅಧ್ಯಕ್ಷ ಪ್ರಭಾಕರ್ ಶಿಗ್ಲಿ,ಮಹಿಳಾ ಮುಖಂಡರಾದ ಗೀತಾಬಾಯಿ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಪದಾಧಿಕಾರಿಗಳು, ತಾಲೂಕ ಛಲವಾದಿ ಮಹಾಸಭಾ ಮುಖಂಡರಾದ ರಾಜು ಛಲವಾದಿ, ಆಂಜನೇಯ ಛಲವಾದಿ, ಕರಬಸಪ್ಪ ಛಲವಾದಿ, ಶ್ರೀಧರ್ ಛಲವಾದಿ, ಸಮಾಜದ ಯುವಕರು ಸೇರಿದಂತೆ ಮತ್ತಿತರ ಗಣ್ಯರು ಯುವಕರು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 