ಒನಕೆ ಓಬವ್ವ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶ
Onake Obavva is an ideal for every woman in the country of courage and adventure
ಕಂಪಿ 11: ಒನಕೆ ಓಬವ್ವ ಕರ್ನಾಟಕದ ಒಬ್ಬ ಧೀರ ಮಹಿಳೆಯಾಗಿದ್ದು ಧೈರ್ಯ ಸಾಹಸದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ತಹಶೀಲ್ದಾರ್ ಮಂಜುನಾಯಕ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಛಲವಾದಿ ಮಹಾಸಭಾ ಸಂಘದಿಂದ ಮಂಗಳವಾರ ನಡೆದ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ರಾಜ್ಯದ ರಕ್ಷಣೆಗಾಗಿ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಒನಕೆ ಓಬವ್ವ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ ಎಂದರು ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮತ್ತು ಪುರಸಭೆ ಸದಸ್ಯ ಸಿ.ಆರ್ ಹನುಮಂತ ಮಾತನಾಡಿ, ಓಬವ್ವ ಶತ್ರು ಸೈನ್ಯ ಚಿತ್ರದುರ್ಗ ಕೋಟೆ ಒಳಗೆ ನುಗ್ಗಿದಾಗ ಒಬ್ಬೊಬ್ಬರನ್ನಾಗಿ ಸೈನಿಕರನ್ನು ಸದೆ ಬಡಿದಳು ಅವರ ಚಿತ್ರದುರ್ಗ ರಾಜ ವೀರ ಮಾದಕರಿ ನಾಯಕ ಆಪ್ತ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದ ಮುದ್ದ ಹನುಮಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಳು. ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸಿ ಚನ್ನಪ್ಪ ಉಪ ತಹಶೀಲ್ದಾರ್ ಷಣ್ಮುಖಪ್ಪ ಶಿರೇಸ್ತೆದಾರ ರಮೇಶ ಶಿಕ್ಷಕ ಬಸವರಾಜ ಮುಖಂಡರಾದ ಎಂ.ಸಿ ಮಾಯಪ್ಪ ಬಿ.ದೆವೇಂದ್ರ ಹುಸೇನಪ್ಪ ವಕೀಲ.ಶಿವಪ್ಪ ಲಕ್ಷಣ ರಾಮಾಸ್ವಾಮಿ ಸಣಾಪುರ ಮರಿಸ್ವಾಮಿ ಫಕೀರ್ಪ ಸಿ ವಿರುಪಾಕ್ಷಿ ಲಿಂಗಪ್ಪ ಕಾಳಿ ವಿರುಫಾಕ್ಷಿ ಸೇರಿದಂತೆ ಸಿಬ್ವಂದಿ ಹಾಗೂ ಸಮಾಜದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 