ಶಿವರಾತ್ರಿ ನಿಮಿತ್ಯ ಮುಕ್ತಿನಾಥೇಶ್ವರ ಬಿಲ್ವಾರ್ಚನೆ, ಪುಷ್ಪಾಲಂಕಾರ ರುದ್ರಾ ಅಭಿಷೇಕ
On the occasion of Shivaratri, Muktinatheshwara Bilvarchane, flower decoration and Rudra Abhishekam
ಕಂಪ್ಲಿ 15 : ಸ್ಥಳೀಯ ಸಕ್ಕರೆ ಕಾರ್ಖಾನೆಯ ಬಳಿಯ ಮುಕ್ತಿನಾಥೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶ್ರದ್ಧೆಯಿಂದ ಭಾನುವಾರ ಜರಗಿದವು ದೇವಸ್ಥಾನದ ಅರ್ಚಕಾ ನಿರಂಜನಯ್ಯಸ್ವಾಮಿ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಬಸ್ಮಾ ಮತ್ತು ರುದ್ರಾ ಅಭಿಷೇಕ ನಡೆದಿದೆ. ನಂತರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿ ನಾನಾ ಪೂಜೆ ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ನೆರವೇರಿದವು ಸಾಕಷ್ಟು ಭಕ್ತರು ಇಲ್ಲಿನ ಶಿವಲಿಂಗ ಹೊಂದಿರುವ ಮುಕ್ತಿನಾಥೇಶ್ವರ ದೇವರ ದರ್ಶನ ಪಡೆದರು. ಪುರಸಭೆ ಮಾಜಿ ಸದಸ್ಯೆ ಹೇಮಾವತಿ ಪೂರ್ಣಚಂದ್ರ ಕುಟುಂಬದವರು ಸಂಜೆ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯೆ ಹೇಮಾವತಿ ಪೂರ್ಣಚಂದ್ರ, ಮುಖಂಡರಾದ ಅರವಿ ಬಸವನಗೌಡ,ಎ.ಶರಣಗೌಡ, ಶ್ರೀಲೇಖಾ, ಸಿರುಗುಪ್ಪ ತಿಮ್ಮಪ್ಪ, ಮಹೇಶ, ನಾಗರಾಜ, ಮಕ್ಕಳಾದ ಎ.ರೋಹಿತ್ ಗೌಡ, ಎ.ಬಸವನಗೌಡ, ಎ.ಸಂಜಯ ಸೇರಿದಂತೆ ಭಕ್ತರು ಇದ್ದರು.
ಫೆ02ಪಟ್ಟಣದ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ದೇವಾಲಯದಲ್ಲಿ ಶಿವರಾತ್ರಿ ನಿಮಿತ್ಯ ಧಾರ್ಮಿಕ ಕಾರ್ಯಕ್ರಮ ಜರುಗಿದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 