ವಿಶ್ವ ವಿಕಲಚೇತನರ ದಿನ ವಿಕಲಚೇತನರಿಗೆ ಅನುಕಂಪವಲ್ಲ, ಆತ್ಮಸ್ಥೈರ್ಯ ಬೇಕು: ಡಾ. ಅಶೋಕ ಕುಮಾರ ಶೆಟ್ಟಿ

ವಿಶ್ವ ವಿಕಲಚೇತನರ ದಿನ ವಿಕಲಚೇತನರಿಗೆ ಅನುಕಂಪವಲ್ಲ, ಆತ್ಮಸ್ಥೈರ್ಯ ಬೇಕು: ಡಾ. ಅಶೋಕ ಕುಮಾರ ಶೆಟ್ಟಿ On International Day of Persons with Disabilities, people with disabilities need self-confidence, no

ಬೆಳಗಾವಿ, ಡಿ.04: ವಿಕಲಚೇತನರಲ್ಲಿ ಅಗಾಧವಾದ ವಿಶೇಷ ಶಕ್ತಿ ಇದೆ. ಈ ದಿಶೆಯಲ್ಲಿ ಅವರಿಗೆ  ಅನುಕಂಪ ಬೇಡ, ಅವಕಾಶಗಳನ್ನು ನೀಡುವುದರ ಮೂಲಕ ಛಲ, ಆತ್ಮಸ್ಥೈರ್ಯ ತುಂಬಬೇಕೆಂದು ಬಿಮ್ಸ್‌ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಹೇಳಿದರು. 

ಕೇಂದ್ರ ಸರ್ಕಾರದ ವಿಕಲಚೇತನರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಪ್ರಾಯೋಜಕತ್ವದ ಅಲಿಮ್ಕೊ ನಿಗಮ ಹಾಗೂ ಬಿಮ್ಸ್‌ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಡಿ.03) ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಯಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಕಲಚೇತನರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. 

ವಿಕಲಚೇತನರಲ್ಲಿ ಧೈರ್ಯ ತುಂಬಿ ಸಹಾಯ ನೀಡುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ತಂದಿದ್ದು, ಸದುಪಯೋಗ ಪಡಿಸಿಕೊಂಡು ಅಸಾಧ್ಯವಾದುದನ್ನು ಸಾಧಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ವಿಕಲಚೇತನರಿಗೆ ಕಿವಿಮಾತು ಹೇಳಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಧಾಕರ್ ಆರ್‌.ಸಿ, ಬೆಳಗಾವಿ ವಿಭಾಗದ ಅಲಿಮ್ಕೊ ಮುಖ್ಯಸ್ಥ ಜನಾರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.