ಅಧಿಕಾರಿಗಳಿಂದ ಸರಕಾರಿ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘನೆ : ವಿಶ್ವನಾಥ ಹರವಿ
Officials violate etiquette at government events: Vishwanath Haravi
ಶಿಗ್ಗಾವಿ 13 : ಪಟ್ಟಣದ ಹೊರವಲಯದ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ಮೆಕ್ಯಾನಿಕ್ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ಸರಕಾರದ ನಿಯಮಾವಳಿಗಳನ್ನು ಅಧಿಕಾರಿಗಳು ಗಾಳಿಗೆ ತೂರಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಭಾಜಪ ಅಧ್ಯಕ್ಷ ವಿಶ್ವನಾಥ ಹರವಿ ಅರೋಪ ವ್ಯಕ್ತಪಡಿಸಿದರು.ನಿನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಸೌಜನ್ಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರನ್ನು ಆಹ್ವಾನ ಮಾಡಿ ಎಂದು ಭಾಜಪ ಕಾರ್ಯಕರ್ತರು ಬೇಡಿಕೊಂಡಾಗ ಅಧಿಕಾರಿಗಳು ಸರಕಾರದ ನಿಯಮಾವಳಿ ಮೀರಲು ಬರದು ಎಂದು ಹೇಳಿದವರು ನಿನ್ನೆ ವೇದಿಕೆಯಲ್ಲಿ ಶಾಸಕರ ಸಹೋದರ ಮುನ್ನಾ ಪಠಾಣ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವೇದಿಕೆಯ ಮೇಲೆ ಇದ್ದರೂ ಅವಾಗ ನಿಮ್ಮ ಸರ್ಕಾರದ ನಿಯಮಾವಳಿ ಎಲ್ಲಿ ಹೋಗಿತ್ತು ? ಏಕೆ ಅಧಿಕಾರಿಗಳ ಅಮಾನತ್ತು ಮಾಡಬಾರದು ಎಂದು ಪ್ರಶ್ನಿಸಿದರು. ಅಲ್ಲದೇ ತಾಲೂಕಿನ ಪ್ರತಿಯೊಂದು ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು ಆಹ್ವಾನಿಸದೇ ಕಾರ್ಯಕ್ರಮ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುತ್ತಿರುವುದು ಖೇದಕರ ಸಂಗತಿ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ರೇಣಕನಗೌಡ ಪಾಟೀಲ ಮಾತನಾಡಿ ತಾಲೂಕಿನ ಪ್ರತಿಯೊಂದು ಕಾಮಗಾರಿಯನ್ನು ಶಾಸಕ ಪಠಾಣ ಅವರ ಸಹೋದರ ಮುನ್ನಾ ಪಠಾಣ ನಿರ್ವಹಿಸುತ್ತಿದ್ದಾರೆ ಹಾಗೂ ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಅನೀಲ ಸಾತಣ್ಣನವರ, ಮಂಡಲ ಪ್ರ.ಕಾರ್ಯದರ್ಶಿಯಾದ ಶಿವಯೋಗಿ ಹುಲಸೋಗಿ, ರೇಣಕನಗೌಡ ಪಾಟೀಲ, ಕಾಶೀನಾಥ್ ಕಳ್ಳಿಮನಿ, ಸಚಿನ ಮಡಿವಾಳರ, ಮಂಜುನಾಥ ಮಿರ್ಜಿ, ಮುಖಂಡರಾದ ಶರಣಪ್ಪ ಬಾಳೋಜಿ, ಕಾಶೀನಾಥ್ ಕಳ್ಳಿಮನಿ, ಮಹೇಶಗೌಡ ಪಾಟೀಲ, ಶಿವನಗೌಡ ಪಾಟೀಲ, ಮಂಜುನಾಥ ಬಡಪ್ಪನವರ, ಮುನೇಶ ಸುಂಕದ, ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 