ಅರ್ಥಪೂರ್ಣ ಜಯಂತಿಗಳ ಆಚರಣೆಗೆ ಅಧಿಕಾರಿಗಳ ಸಿಧ್ಧತೆ
Officials' readiness to celebrate meaningful anniversaries
ತಾಳಿಕೋಟಿ 07: ತಾಲೂಕ ಆಡಳಿತ ವತಿಯಿಂದ ಆಚರಿಸಲಿರುವ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಂತ ಕವಿ ಸರ್ವಜ್ಞನವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಫೆಬ್ರವರಿ 15 ರಂದು ಸಂತ ಸೇವಾಲಾಲ್ ಜಯಂತಿ, 19 ರಂದು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಫೆಬ್ರವರಿ 20 ರಂದು ಸಂತ ಕವಿ ಸರ್ವಜ್ಞ ನವರ ಜಯಂತಿಗಳು ಆಚರಿಸಲಿದ್ದು ಸದರಿ ಜಯಂತಿಗಳು ಯಶಸ್ವಿಗೆ ತಾಲೂಕ ಮಟ್ಟದ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಮೂವರೂ ಮಹಾಪುರುಷರ ಜಯಂತಿಗಳ ಆಚರಣೆಯಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳಬೇಕು ಇದಕ್ಕೆ ಸಂಬಂಧಿಸಿದ ಸಮಾಜದ ಬಾಂಧವರೂ ಸಹಕರಿಸಬೇಕು ಎಂದರು. ಸಭೆಯಲ್ಲಿ ಸಂತ ಸೇವಾಲಾಲ್ ಸಮಾಜದ ಅಧ್ಯಕ್ಷ ಶಂಕರ್ ಎಂ. ಚೌಹಾಣ, ಮರಾಠ ಸಮಾಜದ ಅಧ್ಯಕ್ಷ ಸಂಭಾಜಿರಾವ್ ವಾಡಕರ್, ಕುಂಬಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ, ಗಣ್ಯರಾದ ಕಾಶಿರಾಯಾ ಮೋಹಿತೆ, ಶಶಿಧರ ಡಿಸಲೆ, ಅಣ್ಣಾಜಿರಾವ್ ಜಗತಾಪ, ವಿಠಲ್ ಮೋಹಿತೆ, ಪಿಎಸ್‌ಐ(ಅ.ವಿ.) ಎಸ್.ಎಂ.ಪಡಶಟ್ಟಿ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ, ಶಿರಸ್ತೆದಾರ ಜೆ.ಆರ್. ಜೈನಾಪೂರ, ಸಿಆರ್ಸಿ ರಾಜು ವಿಜಾಪುರ, ಸಮಾಜ ಕಲ್ಯಾಣ ಇಲಾಖೆಯ ಎಸ್ ಎಂ ಕಲಬುರ್ಗಿ, ಕೆಕೆಆರ್ಟಿಸಿ ಬಿ.ಬಿ. ಚೋಕಾವಿ, ಎಪಿಎಂಸಿಯ ಎಸ್.ಆರ್.ಮಠ, ಸಿ.ಟಿ.ಸರ್ವೆಯ ರವಿ ನಾಯಕ ಹಾಗೂ ತಹಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 